ದಾಂಪತ್ಯ ಸಮಸ್ಯೆ: ಪತ್ನಿಯನ್ನು ಕತ್ತುಕೊಯ್ದು ಕೊಲೆಗೈದ ಪತಿ

ಹೊಸದುರ್ಗ: ಕೌಟುಂಬಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಯುವಕನೋರ್ವ ತನ್ನ ಪತ್ನಿಯನ್ನು ಕುತ್ತಿಗೆ ಕೊಯ್ದು ಕೊಲೆಗೈದ ಘಟನೆ ಪಯ್ಯನ್ನೂರು ಸಮೀಪ ನಡೆದಿದೆ.

ಪಯ್ಯನ್ನೂರು ಸಮೀಪ ಕಾಂಕೋಲ್ ಪಾಪ್ಪರಟ್ಟಿ ಬೊಮ್ಮರಡಿ ಕಾಲನಿಯ ವಿ.ಕೆ. ಪ್ರಸನ್ನ (೩೫) ಎಂಬಾಕೆ ಕೊಲೆಗೈಯ್ಯಲ್ಪಟ್ಟ ಯುವತಿ. ಘಟನೆ ಬಳಿಕ ಪತಿ ವಳ್ಳಿಕ್ಕಡಿಯನ್ ಶಾಜಿ (೪೦) ಪಯ್ಯನ್ನೂರು ಪೊಲೀಸ್ ಠಾಣೆಗೆ ತಲುಪಿ ಶರಣಾಗಿದ್ದಾನೆ.

ಪ್ರಸನ್ನ ಹಾಗೂ ಶಾಜಿಯ ದಾಂಪತ್ಯದಲ್ಲಿ ವಿರಸವುಂಟಾಗಿದ್ದು, ಇದರಿಂದ ಎರಡು ವರ್ಷಗಳಿಂದ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ಬೊಮ್ಮರಡಿ ಕಾಲನಿಯ ಮನೆಗೆ ತಲುಪಿದ ಶಾಜಿ ನಿನ್ನೆ ಪ್ರಸನ್ನರ ಕುತ್ತಿಗೆ ಕೊಯ್ದು ಕೊಲೆಗೈದಿರುವುದಾಗಿ ಹೇಳಲಾಗುತ್ತಿದೆ. ಸಮೀಪದ ಮನೆಯಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದುದರಿಂದ ಪರಿಸರದಲ್ಲಿ ಯಾರೂ ಇರಲಿಲ್ಲ. ಇದರಿಂದ ಅಲ್ಲಿ ನಡೆದ ಘಟನೆ, ಕೊಲೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಮನೆಯಲ್ಲಿ ಬಳಸುವ ಚಾಕು ಬಳಸಿ ಶಾಜಿ ಕೊಲೆ ನಡೆಸಿದ್ದಾನೆನ್ನಲಾಗಿದೆ.

ವಿಷಯ ತಿಳಿದ ಪೊಲೀಸರು ತಲುಪಿ ಪ್ರಸನ್ನರ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದ್ದಾರೆ. ಪ್ರಸನ್ನ- ಶಾಜಿ ದಂಪತಿಗೆ ಜನಶ ಪಾರ್ಥಿವ್‌ಶಿವ, ಶಿವದರ್ಶಿದ್ ಎಂಬ ಮೂವರು ಮಕ್ಕಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page