ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸತ್ತಿದ್ದ ೩೩.೨೪ ಲಕ್ಷ ರೂ. ವಶ: ಇಬ್ಬರು ಕಸ್ಟಡಿಗೆ

ಕಾಸರಗೋಡು: ನಗರದಲ್ಲಿ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲು ಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ೩೩.೨೪ ಲಕ್ಷ ರೂ.ವನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಡಿವೈಎಸ್‌ಪಿ ಪಿ.ಕೆ. ಸುಧಾಕರನ್‌ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋಡು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಮತ್ತು ಎಸ್‌ಐ ಅಖಿಲ್‌ರ ನೇತೃತ್ವದ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ಹಣ ಕೈವಶವಿರಿಸಿಕೊಂಡಿದ್ದ ಚೌಕಿ ಅಜಾದ್ ನಗರದ ಮೊಹಮ್ಮದ್ (೫೧) ಮತ್ತು ಚೌಕಿ ಕುನ್ನಿಲ್‌ನ ಸುಲೈಮಾನ್ ಅಹಮ್ಮದ್ (೫೩) ಎಂಬಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರನ್ನೂ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ ನಂತರ ಅವರಿಬ್ಬರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

ನಗರದ ಚಿನ್ನದಂಗಡಿಯೊಂದರ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಹಣ ವಶಪಡಿಸಲಾಗಿದೆ. ವಶಪಡಿಸಲಾದ ಹಣವೆಲ್ಲವೂ ೫೦೦ ರೂ.ಗಳ ನೋಟುಗಳಾಗಿವೆ. ಈ ಬಗ್ಗೆ ಆದಾಯ ಇಲಾಖೆ ಮತ್ತು ಎನ್‌ಫೋ ರ್ಸ್‌ಮೆಂಟ್ ನಿರ್ದೇಶನಾಲ ಯಗಳಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೊಂದೆಡೆ ಆ ಎರಡು ವಿಭಾಗಳಲ್ಲೂ ತನಿಖೆ ಆರಂಭಿಸಿವೆ.

ಇದೇ ರೀತಿ ಕೆಲವು ದಿನಗಳ ಹಿಂದೆ ಕಾಸರಗೋಡು ತಾಯಲಂಗಾಡಿ ಟ್ರಾಫಿಕ್ ಜಂಕ್ಷನ್ ಸರ್ಕಲ್ ಬಳಿ ಪೊಲೀಸರು ನಡೆಸಿದ ಇದೇ ರೀತಿಯ ಕಾರ್ಯಾಚರಣೆಯಲ್ಲಿ ಸರಿಯಾದ ರೀತಿಯ ದಾಖಲು ಪತ್ರಗಳು ಹೊಂದದೆ ಬಚ್ಚಿಡಲಾಗಿದ್ದ ೯೬೯.೯೦ ಗ್ರಾಂ ಚಿನ್ನ ಮತ್ತು ೧೪.೧೨ ಲಕ್ಷ ರೂ.ವನ್ನು ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ನಿನ್ನೆ ನಗರದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ನಿನ್ನೆ ವಶಪಡಿಸಲಾಗಿರುವ ಈ ಹಣವನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾ ಲಯ(೧)ದಲ್ಲಿ ಹಾಜರು ಪಡಿಸಲಾಗು ವುದು. ಈ ಹಣಕ್ಕೆ ಸರಿಯಾದ ದಾಖಲು ಪತ್ರಗಳಿದ್ದಲ್ಲಿ ಅದನ್ನು ಸಂಬಂಧಪಟ್ಟ ವರು ನ್ಯಾಯಾಲ ಯದಲ್ಲಿ ಹಾಜರುಪಡಿಸಿದ್ದಲ್ಲಿ ನ್ಯಾಯಾಲಯ ಮೂಲಕ ಆ ಹಣವನ್ನು ಅವರು ಹಿಂತಿರುಗಿ ಪಡೆ ದುಕೊಳ್ಳಬಹುದು.   ಸರಿಯಾದ ದಾಖಲುಪತ್ರಗಳನ್ನು ನ್ಯಾಯಾ ಲಯದಲ್ಲಿ ಹಾಜರು ಪಡಿಸದೇ ಇದ್ದಲ್ಲಿ ಆ ಹಣ ಸರಕಾರಿ ಖಜಾನೆಗೆ ಹೋಗಿ ಸೇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು ನಗರ ಮತ್ತು ಪರಿಸರ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಾಳಧನ ವಿತರಣೆ ನಡೆಸುತ್ತಿರುವ ಬಗ್ಗೆ ಸ್ಪಷ್ಟ ಸೂಚನೆಗಳು ಲಭಿಸಿವೆ. ಅದರ ಆಧಾರದಲ್ಲಿ ಅದನ್ನು ಪತ್ತೆಹಚ್ಚಲು ಸಮಗ್ರ ಕಾರ್ಯಾ ಚರಣೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page