ದಾಳಿ ಬೆದರಿಕೆ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಹೈಟೆಕ್ ಭದ್ರತೆ
ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ದಾಳಿ ಬೆದರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ರಾಮ ಮಂದಿರದ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ‘೨೪೭ ಕವಚ್’ ಎಂಬ ಹೆಸರಲ್ಲಿ ಹೈಟೆಕ್ ಭದ್ರತೆ ಏರ್ಪಡಿಸಿ ಉತ್ತರ ಪ್ರದೇಶ ಸರಕಾರ ತೀರ್ಮಾನಿಸಿದೆ. ಇದು ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳನ್ನು ಹೊಂದಿದೆ.
ದೇವಸ್ಥಾನದ ಮೇಲಿನ ದಾಳಿ ಮತ್ತು ಅತಿಕ್ರಮಣ ತಡೆಯಲು ೯೦ ಕೋಟಿ ರೂ. ವೆಚ್ಚದಲ್ಲಿ ಪೂಲ್ ಪ್ರೂಫ್ ಕವಚ್ ಭದ್ರತೆ ನಿರ್ಮಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಪೊಲೀಸ್ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆಯ ಮಹಾನಿರ್ದೇಕ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭದ್ರತಾ ಸಲಕರಣೆಗಳನ್ನು ಅಳವಡಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಅದು ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.
ಗ್ರಾಜೆಟ್ಗಳು ಮತ್ತು ಕ್ರ್ಯಾಶ್- ರೇಟೆಡ್ ಬೋಲಾರ್ಡ್ಗಳು ಒಳ ಗೊಂಡ ಭದ್ರತಾ ಸಲಕರಣೆಗಳನ್ನು ಅಳವಡಿಸಲಾಗುತ್ತಿದೆ. ಕನ್ಸರ್ಟೆಡ್ ವೆಹಿಕಲ್ ಅಟ್ಯಾಕ್ ಮತ್ತು ಅಂಡರ್ ವೆಹಿಕಲ್ ಸ್ಕ್ಯಾನರ್ಗಳಿಂದ ಹೆಚ್ಚಿನ ಉದ್ದೇಶಿತ ಕಟ್ಟಡಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಮಾತ್ರವಲ್ಲ ರಾಮ ಮಂದಿರದ ರಕ್ಷಣೆಗಾಗಿ ಕೃತಕ ಕಣ್ಗಾವಲು ವ್ಯವಸ್ಥೆಯನ್ನೂ ಏರ್ಪಡಿಸಲಾ ಗುತ್ತಿದೆ. ತಿಂಗಳಿಗೊಮ್ಮೆ ಸಂಬಂಧಪಟ್ಟ ಅಧಿಕಾರಿಗಳು ರಾಮ ಮಂದಿರದ ಭದ್ರತೆಯನ್ನು ಪರಿಶೀಲಿಸುವರು.
ಭದ್ರತಾ ಸಿಬ್ಬಂದಿಗಳಿಗೆ ಬುಲ್ಲೆಟ್ ಪ್ರೂಫ್ ಜಾಕೆಟ್ಗಳನ್ನೂ ನೀಡಲಾಗು ವುದು. ಆಂಟಿಡ್ರೋನ್ ಸಿಸ್ಟಮ್ಸ್, ನೈಟ್ ಮಿಷನ್ ಉಪಕರಣಗಳು, ಇಂಟಗ್ರೇ ಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸಿಸ್ಟಮ್ ಡಿವೈಸ್ಗಳು ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಅಳ ವಡಿಸಲಾಗುತ್ತಿದೆ. ಭದ್ರತಾ ಸಿಬ್ಬಂದಿಗಳಿ ಗಾಗಿ ೧.೦೨ ಕೋಟಿ ರೂ. ಮೌಲ್ಯದ ವಾಹನಗಳನ್ನು ಖರೀದಿಸಲಾಗಿದೆ. ಈ ಸಾಮಗ್ರಿಗಳು ದೇವಸ್ಥಾನಕ್ಕೆ ಯಾವುದೇ ಒಳನುಗ್ಗುವ ಪ್ರಯತ್ನವನ್ನು ತಡೆಯಲು ಸಹಾಯ ಮಾಡುತ್ತದೆ. ಜನ್ಮಭೂಮಿ ಮಾರ್ಗವಾಗಿ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಕ್ಷಣವೇ ಅವುಗಳ ಒಳಗಿನಿಂದ ಸ್ಕ್ಯಾನ್ ಮಾಡಲಾಗುತ್ತದೆ. ಅಯೋಧ್ಯೆಯ ರಾಮಮಂದಿರದ ಭದ್ರತೆಗಾಗಿ ಮಾತ್ರವಾಗಿ ಉತ್ತರ ಪ್ರದೇಶ ಸರಕಾರ ೧೩೫ ವಿಶೇಷ ಕಾರ್ಯಪಡೆ ಕಮಾಂಡೋಗಳ ವಿಶೇಷ ಘಟಕವನ್ನು ರಚಿಸಿದೆ. ರಾಮ ಮಂದಿರವನ್ನು ಬಾಂಬು ದಾಳಿ ನಡೆಸಿ ಸ್ಪೋಟಿಸಲಾಗುವುದೆಂಬ ಇ-ಮೇಲ್ ಸಂದೇಶ ಮೊನ್ನೆ ರಾತ್ರಿ ಪೊಲೀಸರಿಗೆ ಲಭಿಸಿತ್ತು. ಅದಕ್ಕೆ ಸಂಬಂ ಧಿಸಿ ಇಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇವರು ಪಾಕಿಸ್ತಾನದ ಉಗ್ರಗಾಮಿ ಸಂಘ ಟನೆಯೊಂದಿಗೆ ನಂಟು ಹೊಂದಿರುವು ದಾಗಿ ಪೊಲೀಸರು ಶಂಕಿಸುತ್ತಿದ್ದು, ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗು ತ್ತಿದೆ. ಇಂತಹ ಬೆದರಿಕೆಯ ಹಿನ್ನೆಲೆಯೇ ಶ್ರೀರಾಮ ಮಂದಿರಕ್ಕೆ ಹೈಜೆಕ್ ಭದ್ರತೆ ಏರ್ಪಡಿಸಲು ಸರಕಾರ ಮುಂದಾಗಿರುವು ದರ ಪ್ರಧಾನ ಹಿನ್ನೆಲೆಯಾಗಿದೆ.