‘ದೀಪ್ತಂ ೨೦೨೩’ ಉಚಿತ ಉದ್ಯೋಗ ಮೇಳ ೨೮ರಂದು

ಕಾಸರಗೋಡು ಜಿಲ್ಲಾ ಎಂಪ್ನೋಯ್‌ಮೆAಟ್ ಎಔ್ವ್ಜ^್ರ‍್ಧಂಜ್ ಮತ್ತು ಎಂಪ್ಲೋಯಬಿಲಿಟಿ ಸೆಂಟರ್‌ನ ಆಶ್ರಯದಲ್ಲಿ ‘ದೀಪ್ತಂ ೨೦೨೩’ ಉಚಿತ ಉದ್ಯೋಗ ಮೇಳ ಅಕ್ಟೋಬರ್ ೨೮ ರಂದು ಬೆಳಿಗ್ಗೆ ೯.೩೦ ಕ್ಕೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ನಡೆಯಲಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸು ವರು. ಕಾಸರಗೋಡು ನಗರಸಭೆ ಅಧ್ಯಕ್ಷ ವಿ.ಎಂ.ಮುನೀರ್ ಅಧ್ಯಕ್ಷತೆ ವಹಿಸುವರು. ಎಲ್.ಐ.ಸಿ, ಎಚ್.ಡಿ. ಎಫ್.ಸಿ ಲೈಫ್, ಆದಿತ್ಯ ಬಿರ್ಲಾ, ಕಲ್ಯಾಣ್ ಸಿಲ್ಕ್ಸ್, ರಿಲಯನ್ಸ್ ಮತ್ತು ನಿಪ್ಪೋನ್ನಂತಹ ಪ್ರಮುಖ ಬ್ರಾಂಡ್ ಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಆಸಕ್ತ ಅಭ್ಯರ್ಥಿಗಳು ಅಂದು ಬೆಳಿಗ್ಗೆ ೯ ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಹತೆ ಸಾಬೀ ತುಪಡಿಸುವ ಸರ್ಟಿಫಿಕೇಟ್ ಗಳು ಮತ್ತು ಅದರ ನಕಲು, ಬಯೋ ಡಾಟಾ (ಕನಿಷ್ಠ ೩ ನಕಲು) ಮುಂತಾ ದವುಗಳೊಂದಿಗೆ ಸ್ಪೋಟ್ ರಿಜಿಸ್ಟ್ರೇ ಷನ್ ನಡೆಸಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಎಂಪ್ಲೋಯಬಿಲಿಟಿ ಸೆಂಟರ್ ಕಾಸರಗೋಡು ದೂರವಾಣಿ ಸಂಖ್ಯೆ ೦೪೯೯೪-೨೫೫೫೮೨, ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

You cannot copy content of this page