ದೂರುದಾತೆಯ ನಗ್ನ ಚಿತ್ರಗಳನ್ನು ಆಗ್ರಹಿಸಿದ ಪೊಲೀಸ್ ಸಿಬ್ಬಂದಿ: ಕೇಸು ದಾಖಲು

ಕಣ್ಣೂರು: ದೂರುದಾತೆಗೆ ಫೋನ್ ಕರೆ ಮಾಡಿದ ಪೊಲೀಸ್ ಸಿಬ್ಬಂದಿಯೋರ್ವ ಆಕೆಯ ನಗ್ನ ಚಿತ್ರಗಳನ್ನು ಕಳುಹಿಸಿಕೊಡುವಂತೆ ಆಗ್ರಹಪಟ್ಟಿರುವುದಾಗಿ ದೂರಲಾಗಿದೆ. ಕಣ್ಣೂರು ರೂರಲ್ ಪೊಲೀಸ್ ಠಾಣೆಯ ದೂರು ಸ್ವೀಕಾರ ಸೆಲ್‌ನ ಸಿಬ್ಬಂದಿಯಾದ ಪಯ್ಯನ್ನೂರು ನಿವಾಸಿ ರಂಜಿತ್ ವಿರುದ್ಧ ಈ ದೂರುಂಟಾಗಿದೆ. ಕಣ್ಣೂರಿನ ಹಾಸ್ಟೆಲ್‌ವೊಂದರಲ್ಲಿ ವಾಸಿಸುತ್ತಿರುವ ೨೧ರ ಹರೆಯದ ಯುವತಿಯೋರ್ವೆ ತನ್ನ ತಂದೆ ವಿರುದ್ಧ ಕಣ್ಣೂರು ರರಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ತಂದೆಯಿಂದ ಉಂಟಾಗಿರುವ ಕಿರುಕುಳ ಬಗ್ಗೆ ಆಕೆ ದೂರಿನಲ್ಲಿ ತಿಳಿಸಿದ್ದಳು. ಈ ಬಗ್ಗೆ ತನಿಖೆಯ ಅಂಗವಾಗಿ ಮಾಹಿತಿ ಸಂಗ್ರಹಿಸಲೆಂದು ತಿಳಿಸಿ ಯುವತಿಗೆ ಫೋನ್ ಕರೆ ಮಾಡಿದ ರಂಜಿತ್ ಆಕೆಯ ನಗ್ನ ಚಿತ್ರಗಳನ್ನು ಕಳುಹಿಸಿಕೊಡುವಂತೆ ತಿಳಿಸಿದ್ದನೆನ್ನಲಾಗಿದೆ. ಈ ಬಗ್ಗೆ ಯುವತಿ ಪೊಲೀಸ್ ಸಿಬ್ಬಂದಿ ವಿರುದ್ಧ ಕಣ್ಣೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದರಂತೆ ಪೊಲೀಸ್ ಸಿಬ್ಬಂದಿ ರಂಜಿತ್ ವಿರುದ್ಧ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page