ದೇವಸ್ಥಾನಗಳ ಉತ್ಸವಗಳಿಗೆ ಆನೆಯ ಬದಲಿಗೆ ರಥಗಳ ಬಳಕೆ
ತಿರುವನಂತಪುರ: ರಾಜ್ಯದಲ್ಲಿ ದೇವಸ್ಥಾನಗಳ ಉತ್ಸವಕ್ಕೆ ಆನೆಗಳನ್ನು ಬಳಸುವ ಪರಂಪರಾಗತ ಸಂಪ್ರದಾ ಯ ರೀತಿಯನ್ನು ಕೈಬಿಟ್ಟು ರಥಗಳನ್ನು ಬಳಸುವ ಹೊಸ ಸಂಪ್ರದಾಯ ಅನು ಸರಿಸಲು ಮುಜರಾಯಿ ಮಂಡಳಿ ತೀರ್ಮಾನಿಸಿದೆ.
ರಾಜ್ಯದ ಕೆಲವು ದೇವಸ್ಥಾನಗಳಲ್ಲಿ ಉತ್ಸವ ವೇಳೆ ಉಪಯೋಗಿಸಿದ ಆನೆಗಳಿಗೆ ಮದವೇರಿದ ಪರಿಣಾಮ ಹಲವು ಭಕ್ತರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಸಲುವಾಗಿ ಮಂಡಳಿ ಈ ಹೊಸ ತೀರ್ಮಾನಕ್ಕೆ ಬಂದಿದೆ. ಇದು ಮಾತ್ರವಲ್ಲ ಕ್ಷೇತ್ರೋತ್ಸವ ಗಳ ಅಂಗವಾಗಿ ನಡೆಸಲಾಗುವ ಮೆರವಣಿಗೆಗಳಲ್ಲಿ ಲೇಸರ್ ಶೋ, ಡಿಜೆ ಹಾಗೂ ನಾಸಿಕ್ ಡೋಲ್‌ಗಳ ಬಳಕೆಯ ಮೇಲೂ ನಿಷೇಧ ಹೇರಲು ಮಂಡಳಿ ತೀರ್ಮಾ ನಿಸಿದೆ. ಆದರೆ ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ರೀತಿಯ ಅಚಾರಗಳಂತೆ ಆನೆಗಳನ್ನು ಬಳಸಬೇಕಾಗಿ ರುವುದು ಅನಿವಾರ್ಯವೆನಿಸಿದಲ್ಲಿ ಅದಕ್ಕೆ ಆನೆಗಳನ್ನು ಉಪಯೋಗಿಸುವುದರ ಮೇಲೆ ನಿಷೇಧ ಹೇರದಿರಲು ಮಂಡಳಿ ತೀರ್ಮಾನಿಸಿದೆ. ತಿರುವಿದಾಂಕೂರು ಮುಜರಾಯಿ ಮಂಡಳಿ ಈ ತೀರ್ಮಾನ ಕೈಗೊಂಡಿದೆ. ಇದೇ ಸಂದರ್ಭದಲ್ಲಿ ದೇವಸ್ಥಾನಗಳ ಆರಾಟು ಕಾರ್ಯಕ್ರಮಗಳಲ್ಲಿ ಆನೆಗಳ ಬಳಕೆಯನ್ನು ಸೀಮಿತಗೊಳಿಸುವ ತೀರ್ಮಾನವನ್ನು ಸಭೆ ಕೈಗೊಂಡಿದೆ.