ದೈವಪಾತ್ರಿ ನಿಧನ
ಕಾಸರಗೋಡು: ನೆಲ್ಲಿಕುಂಜೆ ಅಂಬೇಡ್ಕರ್ ರಸ್ತೆ ಕೆ.ಎ. ನಿವಾಸ್‌ನ ದಿ| ಮಿಲಿಟ್ರಿ ಐತ್ತಪ್ಪರ ಪುತ್ರ ಚಂದ್ರಕಾಂತ ಕೆ.ಎ (54) ಇಂದು ಮುಂಜಾನೆ ಸ್ವ-ಗೃಹದಲ್ಲಿ ನಿಧನಹೊಂದಿದರು. ಪ್ಲಂಬರ್ ಕಾರ್ಮಿಕನಾದ ಇವರಿಗೆ ಅಲ್ಪಕಾಲ ದಿಂದ ಅಸೌಖ್ಯ ಬಾಧಿಸಿದ್ದು, ಇದರಿಂದ ವಿಶ್ರಾಂತಿಯಲ್ಲಿದ್ದರು.
ನೆಲ್ಲಿಕುಂಜೆ ಶ್ರೀ ಕೋಮರಾಡಿ ದೈವಸ್ಥಾನ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರಾದ ಇವರು ದೈವಪಾತ್ರಿಯಾ ಗಿಯೂ ಸೇವೆ ಸಲ್ಲಿಸುತ್ತಿದ್ದರು.
ಮೃತರು ತಾಯಿ ಲಲಿತಾ, ಪತ್ನಿ ಗೀತಾ, ಮಕ್ಕಳಾದ ಮೇಘ, ದಿಯ, ಸಹೋದರರಾದ ರಾಜಶೇಖರ, ಮಧುಕರ, ಸಹೋದರಿ ಮಮತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ರಾಜೇಶ್ ಕುಮಾರ್ ಯಾನೆ ಕೇಶವ ಈ ಹಿಂದೆ ನಿಧನಹೊಂದಿದ್ದಾರೆ. ನಿಧನಕ್ಕೆ ನೆಲ್ಲಿಕುಂಜೆ ಶ್ರೀ ಕೋಮರಾಡಿ ದೈವಸ್ಥಾನ ಆಡಳಿತ ಸಮಿತಿ ಸಂತಾಪ ಸೂಚಿಸಿದೆ.