ಧರ್ಮತ್ತಡ್ಕದಲ್ಲಿ ಉಪಜಿಲ್ಲಾ ಕಲೋತ್ಸವದ ಅಲೋಕನಾ ಸಭೆ

ಧರ್ಮತ್ತಡ್ಕ: ನವಂಬರ್ ೭ರಿಂದ ೧೦ರವರೆಗೆ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ ೬೨ನೇ ಕೇರಳ ರಾಜ್ಯ ಉಪಜಿಲ್ಲಾ ಶಾಲಾ ಕಲೋತ್ಸವದ ಅವಲೋಕನಾ ಸಭೆ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲೋತ್ಸವದ ಯಶಸ್ವಿಗಾಗಿ ರಚಿಸಿದ ೯ ಉಪಸಮಿತಿಗಳ ಕನ್ವೀನರ್ ತಮ್ಮ ಸಮಿತಿಯ ಪ್ರಗತಿಯನ್ನು ಮಂಡಿಸಿದರು. ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಹೈಸ್ಕೂಲ್ ಮುಖ್ಯೋಪಾ ಧ್ಯಾಯ ಗೋವಿಂದ ಭಟ್, ಯುಪಿ ಮುಖ್ಯೋಪಾಧ್ಯಾಯ ಮಹಾಲಿಂಗ ಎಚ್‌ಎಂ, ಫಾಮ್ ಸೆಕ್ರೆಟರಿ ಶಾಮ ಭಟ್, ಪಿಟಿಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಸ್ಥಳೀಯ ಆರೋಗ್ಯಾಧಿಕಾರಿ ತಿರುಮ ಲೇಶ್, ಶಂಕರರಾವ್ ಕಕ್ವೆ ಉಪಸ್ಥಿತ ರಿದ್ದರು. ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿ, ಸೂರ್ಯನಾರಾಯಣ ಭಟ್  ವಂದಿಸಿ ದರು. ಉಮಾದೇವಿ ನಿರೂಪಿಸಿದರು.

Leave a Reply

Your email address will not be published. Required fields are marked *

You cannot copy content of this page