ಧರ್ಮತ್ತಡ್ಕ ಶಾಲೆಯಲ್ಲಿ ಕಲೋತ್ಸವಕ್ಕೆ ಸಂಭ್ರಮದ ತೆರೆ
ಎಚ್‌ಎಸ್‌ಎಸ್ ಜನರಲ್‌ನಲ್ಲಿ ಧರ್ಮತ್ತಡ್ಕ ಶಾಲೆ ಚಾಂಪಿಯನ್ಧರ್ಮತ್ತಡ್ಕ: ಮಂಜೇಶ್ವರ ಉಪ ಜಿಲ್ಲಾಮಟ್ಟದ ೬೨ನೇ ಶಾಲಾ ಕಲೋತ್ಸವದಲ್ಲಿ ಎಚ್.ಎಸ್.ಎಸ್ ಜನರಲ್ ವಿಭಾಗದಲ್ಲಿ ಧರ್ಮತ್ತಡ್ಕ ಎಸ್‌ಡಿಪಿಎಚ್‌ಎಸ್‌ಎಸ್ ಪ್ರಥಮ, ಜಿಎಚ್‌ಎಸ್‌ಎಸ್ ಪೈವಳಿಕೆನಗರ ದ್ವಿತೀಯ ಸ್ಥಾನ ಪಡೆದಿದೆ. ಯುಪಿ ಜನರಲ್‌ನಲ್ಲಿ ಕಯ್ಯಾರು ಡಿಬಿಎಯು ಪಿಎಸ್ ಪ್ರಥಮ, ಮಂಜೇಶ್ವರ ಎಸ್‌ಎಟಿಎಚ್‌ಎಸ್ ದ್ವಿತೀಯ ಸ್ಥಾನ ಪಡೆದಿದೆ. ಎಲ್‌ಪಿ ಜನರಲ್‌ನಲ್ಲಿ ಮಂಜೇಶ್ವರ ಎಸ್‌ಎಟಿಎಲ್‌ಪಿಎಸ್ ಪ್ರಥಮ ಹಾಗೂ ಕಯ್ಯಾರು, ಕುಬ ಣೂರು, ಕಳಿಯೂರು ಶಾಲೆಗಳು ಸಮಾನ ಅಂಕ ಪಡೆದು ದ್ವಿತೀಯ ಸ್ಥಾನ ಹಂಚಿಕೊಂಡಿವೆ. ಸಂಸ್ಕೃತ ಎಚ್‌ಎಸ್ ನಲ್ಲಿ ಕೊಡ್ಲಮೊಗರು ಎಸ್‌ವಿವಿ ಎಚ್‌ಎಸ್ ಪ್ರಥಮ, ಮೀಯಪದವು ಎಸ್‌ವಿವಿಎಚ್‌ಎಸ್ ದ್ವಿತೀಯ ಸ್ಥಾನ ಪಡೆದಿದೆ.
ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನವಂಬರ್ 7 ರಿಂದ ಆರಂಭಗೊAಡು 4 ದಿನಗಳಲ್ಲಾಗಿ ಸುಮಾರು 4000 ಕ್ಕೂ ಅಧಿಕ ಮಂದಿ ತಮ್ಮ ಪ್ರತಿಭಾ ಪ್ರದರ್ಶನಗೈದರು. ಸಮಾರೋಪ ಸಮಾರಂಭದಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವ ಹಿಸಿದರು. ಅವರು ಮಾತನಾಡಿ, ಧರ್ಮತ್ತಡ್ಕ ಪ್ರದೇಶದಲ್ಲಿ ಕಲೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಸಲು ಕಾರಣವಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿ ಹಲವು ಭಾಷೆಗಳ , ಹಲವು ಸಂಸ್ಕೃತಿಗಳ ಸಾಂಸ್ಕೃತಿಕ ವಿನಿಮಯವು ರಾಷ್ಟ್ರಕವಿ ಗೋವಿಂದ ಪೈಗಳು ಜನಿಸಿದ ಮಂಜೇಶ್ವರದ ನಾಡಿನಲ್ಲಿ ಕಲೋತ್ಸವದ ವೇದಿಕೆಯ ಮೂಲಕ ಬಹಳ ಪರಿಣಾಮಕಾರಿಯಾಗಿ ಸಾಧ್ಯವಾಗಿದೆ ಎಂದರು. ಶಿಸ್ತುಬದ್ಧವಾಗಿ ಸಂಘಟಿಸಿದ ಧರ್ಮತ್ತಡ್ಕ ವಿದ್ಯಾಸಂಸ್ಥೆಗೆ ಹಾಗೂ ವಿದ್ಯಾಭಿಮಾನಿ ಜನತೆಗೆ ಅಭಿನಂದನೆಯನ್ನು ಸಲ್ಲಿಸಿದರು.