ಧರ್ಮತ್ತಡ್ಕ ಶಾಲೆಯಲ್ಲಿ ಶಾಲಾ ಕಲೋತ್ಸವ

ಧರ್ಮತ್ತಡ್ಕ; ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರೌಢಶಾಲಾ ವಿಭಾಗದ ಶಾಲಾ ಕಲೋತ್ಸವವು ಇಂದು ಆರಂ ಭಗೊಂಡಿತು. ಯಕ್ಷಗಾನ ಕಲಾವಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಉದ್ಘಾ ಟಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಯೊಂದು ಮಗುವಿ ನಲ್ಲಿಯೂ ಕೂಡಾ ಸುಪ್ತವಾದ ಪ್ರತಿಭೆ ಇರುತ್ತದೆ,ಮರೆಯಲ್ಲಿರುವ ಅಂತಹ ಪ್ರತಿಭೆಯನ್ನು ಹೊರ ತರುವಲ್ಲಿ ಶಾಲಾ ಕಲೋತ್ಸವವು ವೇದಿಕೆಯನ್ನು ಒದಗಿಸುತ್ತದೆ. ಇಂತಹ ವೇದಿಕೆಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ ಅನೇಕರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ .ಪಠ್ಯ ವಿಷಯಗಳಲ್ಲಿ ಸಾಧನೆಯನ್ನು ಮಾಡುವುದರೊಂದಿಗೆ ಪಠ್ಯೇತರ ವಿಷಯಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡು ಪುಸ್ತಕ ಪ್ರಪಂಚದಾಚೆಗಿನ ಜ್ಞಾನವನ್ನು ಪಡೆಯುವಂತಾಗಬೇಕು ಎಂದು ಹಾರೈಸಿದರು. ಮುಖ್ಯೋಪಾಧ್ಯಾಯ ಇ.ಎಚ್ ಗೋವಿಂದ ಭಟ್ ಪ್ರಾಸ್ತಾ ವಿಕ ನುಡಿಗಳನ್ನಾಡಿದರು. ಶಾಲಾ ಮೇನೇಜರ್ ಶಂಕರ ನಾರಾಯಣ ಭಟ್, ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ ಶೆಟ್ಟಿ ಕುಡಾಲ್ ಹಾಗೂ ಅಧ್ಯಾಪಕ ರಾಮಕೃಷ್ಣ ಭಟ್ ಶುಭಕೆÆÃರಿದರು. ರಾಜೇಶ್, ವಸಂತ ಮೂಡಂಬೈಲ್, ಉಷಾ ಕೆ.ಆರ್, ಶಶಿಕುಮಾರ್ ಪಿ ಉಪಸ್ಥಿತರಿದ್ದರು. ಈಶ್ವರಿ ಡಿ ಸ್ವಾಗ ತಿಸಿ, ಶಾಲಾ ಕಲೋತ್ಸವ ಸಂಚಾಲಕಿ ವಿಚೇತ ಎಲ್ ವಂದಿಸಿದರು. ಶ್ವೇತ ಕುಮಾರಿ ನಿರೂಪಿಸಿದರು. ವಿದ್ಯಾರ್ಥಿ ನಿಯರು ಪ್ರಾರ್ಥನೆಯನ್ನು ಹಾಡಿದರು.

RELATED NEWS

You cannot copy contents of this page