ಧರ್ಮದ ಚೌಕಟ್ಟು ಮಾನವನನ್ನು ಮಾಧವನ್ನಾಗಿಸುತ್ತದೆ- ಸುಬ್ರಹ್ಮಣ್ಯಶ್ರೀ

ಮಾನ್ಯ: ಜಗತ್ತಿನ ಜೀವ ಜಾಲಗಳಲ್ಲಿ ಎಲ್ಲವೂ ಸಮಾನವಾಗಿದ್ದರು ಧರ್ಮಾಧರಿತ ಜೀವನ ನಡೆಸುವ ಒಂದಂಶದ ಹೆಚ್ಚುಗಾರಿಕೆಯಿಂದ ಮನುಷ್ಯ ಇತರವುಗಳಿಗಿಂತ ಶ್ರೇಷ್ಟನಾಗಿ ಗುರುತಿಸಲ್ಪಡುತ್ತಿದ್ದಾನೆ. ಧರ್ಮದ ಚೌಕಟ್ಟು ಮಾನವನನ್ನು ಮಾಧವನ್ನಾಗಿ ಮಾಡುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ನಡೆಯುತ್ತಿರುವ ಪುನರ್‌ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಯುವ ಸಂಗಮದಲ್ಲಿ ಅವರು ಆಶೀರ್ವಚನ ನೀಡಿದರು. ಶ್ರೀ ಮಹಾವಿಷ್ಣು ಯುವಕ ವೃಂದದ ಅಧ್ಯಕ್ಷ ವಿಜಯ ಕುಮಾರ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕ ದೇವಾಲಯ ಟ್ರಸ್ಟ್ ಸದಸ್ಯ ಅಭಿಲಾಷ್ ಪಿ.ವಿ. ಉದ್ಘಾಟಿಸಿದರು. ಆದರ್ಶ್ ಗೋಕುಲೆ ಧಾರ್ಮಿಕ ಉಪನ್ಯಾಸ ನೀಡಿದರು. ಬ್ರಹ್ಮಶ್ರೀ ನಾರಾಯಣ ಆಸ್ರ ಉಳಿಯ, ಅನೂಪ್ ರಮಣ ಶರ್ಮ ಮುಳ್ಳೇರಿಯ ಉಪಸ್ಥಿತರಿದ್ದರು. ಟ್ರಸ್ಟಿ ನವೀನ್‌ಚಂದ್ರ ಪಿ.ಕೆ., ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಮಧುಸೂದನ ಆಯರ್, ಶಶಿಧರ ಚೇಡಿಕ್ಕಾನ, ನರಸಿಂಹ ಭಟ್ ಕಾರ್ಮಾರು, ನಿತ್ಯಾನಂದ ಆರ್. ಮಾನ್ಯ, ಸಿದ್ಧಾರ್ಥ್ ಭಾಗವಹಿಸಿದರು.

ಯುವಕವೃಂದದ ಪ್ರಧಾನ ಕಾರ್ಯದರ್ಶಿ ಗೋಕುಲ್ ಶರ್ಮ ಕಾರ್ಮಾರು ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ರಂಜಿತ್ ಯಾದವ್ ಎ.ಎಸ್. ವಂದಿಸಿದರು. ಡಾ. ಶ್ರೀಶ ಕುಮಾರ್ ಪಂಜಿತ್ತಡ್ಕ ನಿರೂಪಿಸಿದರು. ಧರಣಿ ಸರಳಿ ಪ್ರಾರ್ಥನೆಗೈದರು. ಮುಳ್ಳೇರಿಯದ ಅಮ್ಮ ತಿರುವಾದಿರ ತಂಡದಿಂದ ತಿರುವಾದಿರ ನೃತ್ಯ, ಮಾನ್ಯದ ಅನುಷ ಟೀಚರ್ ಶಿಷ್ಯ ವೃಂದದವರಿಂದ ಭರಟನಾಟ್ಯ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *

You cannot copy content of this page