ಧಾರಾವಾಹಿ ಚಿತ್ರೀಕರಣ ಮಧ್ಯೆ ಲೈಂಗಿಕ ಆಕ್ರಮಣ: ದೂರು
ಕೊಚ್ಚಿ: ಧಾರಾವಾಹಿಯ ನಟಿ ನೀಡಿದ ದೂರಿನಂತೆ ಇಬ್ಬರು ನಟರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಿಜು ಸೋಪಾನ ಹಾಗೂ ಎಸ್ಪಿ ಶ್ರೀಕುಮಾರ್ ವಿರುದ್ಧ ಕೇಸು ದಾಖಲಿಸಲಾಗಿದೆ. ಕೊಚ್ಚಿಯಲ್ಲಿ ಧಾರಾವಾಹಿ ಚಿತ್ರೀಕರಿಸುತ್ತಿದ್ದ ಮಧ್ಯೆ ಲೈಂಗಿಕ ಅತಿಕ್ರಮಣ ನಡೆಸಿರುವುದಾಗಿ ನಟಿ ದೂರು ನೀಡಿದ್ದರು. ಎರ್ನಾಕುಳಂ ಇನ್ಫೋ ಪಾರ್ಕ್ ಪೊಲೀಸ್ ನಟರ ವಿರುದ್ಧ ಕೇಸು ದಾಖಲಿಸಿದೆ.
ಕೇಸನ್ನು ಪ್ರತ್ಯೇಕ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ. ಪ್ರಸಿದ್ಧವಾದ ಧಾರಾವಾಹಿಯ ಇಬ್ಬರು ನಟರ ವಿರುದ್ಧ ನಟಿ ದೂರು ನೀಡಿದ್ದು, ಇವರೆಲ್ಲ ಜೊತೆಯಾಗಿ ನಟಿಸುವವರಾಗಿ ದ್ದಾರೆ. ಹೇಮಾ ಸಮಿತಿ ವರದಿಗೆ ಸಂಬಂಧಿಸಿ ಕೇಸುಗಳನ್ನು ತನಿಖೆ ನಡೆಸುವ ಪ್ರತ್ಯೇಕ ತನಿಖಾ ತಂಡದ ಮುಂದೆಯೂ ನಟಿ ಹೇಳಿಕೆ ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ನಟಿ ಧಾರಾ ವಾಹಿಯಿಂದ ಹಿಂಜರಿದಿದ್ದಾರೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.