ಧಾರ್ಮಿಕ ಮುಖಂಡ ಪಳ್ಳತ್ತಡ್ಕ ಪರಮೇಶ್ವರ ಭಟ್ ನಿಧನ
ಬದಿಯಡ್ಕ: ಹಿರಿಯ ಧಾರ್ಮಿಕ ಮುಂದಾಳು, ವಿಧ್ವಾಂಸ, ವಾಗ್ಮಿ ಪಳ್ಳತ್ತಡ್ಕ ಪರಮೇಶ್ವರ ಭಟ್ (85 ನಿಧನ ಹೊಂದಿದರು. ಉಡುಪಿಯಲ್ಲಿರುವ ಪುತ್ರ ಸುಬ್ರಹ್ಮಣ್ಯ ಅವರ ಮನೆಯಲ್ಲಿ ನಿನ್ನೆ ಸಂಜೆ ನಿಧನ ಸಂಭವಿಸಿದೆ. ವೈದಿಕರಾಗಿದ್ದ ಪಳ್ಳತ್ತಡ್ಕ ಪರಮೇಶ್ವರ ಭಟ್ 60ಕ್ಕೂ ಹೆಚ್ಚು ವರ್ಷ ಸಮಾಜಸೇವೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಹಲವು ಧಾರ್ಮಿಕ ಕೇಂದ್ರಗಳಲ್ಲಿ ಪ್ರತಿಷ್ಠೆಗೆ ನೇತೃತ್ವ ವಹಿಸಿದ್ದರು. ಆರ್‌ಎಸ್‌ಎಸ್‌ನ ಸ್ವಯಂ ಸೇವಕರಾಗಿದ್ದ ಇವರು ಪಳ್ಳತ್ತಡ್ಕ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ದಿ| ಸುಬ್ರಾಯ ಭಟ್- ದಿ| ಪರಮೇಶ್ವರಿ ದಂಪತಿ ಪುತ್ರನಾದ ಇವರು ಪತ್ನಿ ಜಾಹ್ನವಿ, ಇತರ ಮಕ್ಕಳಾದ ಶಿವಶಂಕರ ಭಟ್, ಶಶಿಧರ ಭಟ್, ಶೈಲಜ, ಅಳಿಯ ಮುರಳೀಧರ, ಸೊಸೆಯಂದಿ ರಾದ ಸ್ವರ್ಣಗೌರಿ, ಈಶ್ವರಿ, ಭಾರ್ಗವಿ, ಸಹೋದರ- ಸಹೋದರಿಯರಾದ ವಿಶ್ವೇಶ್ವರ ಭಟ್, ಕೃಷ್ಣ ಭಟ್, ಶಂಕರನಾರಾಯಣ ಭಟ್, ಸದಾಶಿವ ಭಟ್, ಗಣಪತಿ ಭಟ್, ಸುಬ್ರಹ್ಮಣ್ಯ ಭಟ್, ಶಂಕರಿ, ಜಯಂತಿ, ಪ್ರಸನ್ನ ಕುಮಾರಿ, ವಿಜಯಲಕ್ಷ್ಮಿ, ಶಾರದ, ದೇವಕಿ, ಸೀತಾಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಿಧನಕ್ಕೆ ಪಳ್ಳತ್ತಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಸಂತಾಪ ಸೂಚಿಸಿದೆ.