ನಕಲಿ ಮಂತ್ರವಾದ ಕೇಂದ್ರಕ್ಕೆ ಹಾನಿ: ಮಂತ್ರವಾದಿ ಸೆರೆ
ಹೊಸದುರ್ಗ: ಕಣ್ಣೂರು ಕೂತುಪರಂಬ ಬಳಿಯ ನಕಲಿ ಮಂತ್ರವಾದ ಕೇಂದ್ರವನ್ನು ಡಿವೈಎಫ್‌ಐ ನೇತೃತ್ವದಲ್ಲಿ ಹಾನಿಗೊಳಿಸಲಾಗಿದೆ. ಕುಟ್ಟಿಚಾತನ್ ಮಂತ್ರವಾದ ಹೆಸರಲ್ಲಿ ಇಲ್ಲಿ ನಕಲಿ ಚಿಕಿತ್ಸೆ, ಮಂತ್ರವಾದ ನಡೆಯುತ್ತಿದ್ದುದಾಗಿ ಆರೋಪಿಸಲಾಗಿದೆ. ಕೇಂದ್ರದಲ್ಲಿ ಚಾತನ್ ಜಯೇಶ್ ಅಲಿಯಾಸ್ ಜಯನ್ (೪೪) ಎಂಬ ವ್ಯಕ್ತಿ ಮಂತ್ರವಾದ ನಡೆಸುತ್ತಿದ್ದು ಈತನನ್ನು ಕೆಲವು ದಿನಗಳ ಹಿಂದೆ ಪೊಲೀಸರು ಸೆರೆಹಿಡಿದಿದ್ದರು.
ಕಲಿಕೆಯಲ್ಲಿ ಹಿಂದುಳಿದಿರುವ ೧೬ರ ಹರೆಯದ ವಿದ್ಯಾರ್ಥಿನಿಯನ್ನು ಇಲ್ಲಿಗೆ ಕರೆತರಲಾಗಿತ್ತು. ಈ ಬಾಲಕಿಗೆ ಈತ ಮಂತ್ರವಾದ ಹೆಸರಲ್ಲಿ ಕಿರುಕುಳ ನೀಡಿದ ಬಗ್ಗೆ ತಿಳಿದುಬಂದ ಹಿನ್ನೆಲೆಯಲ್ಲಿ ಬಾಲಕಿಗೆ ಕೌನ್ಸಿಲಿಂಗ್ ನಡೆಸಲಾಗಿತ್ತು. ಇದರ ಆಧಾರದಲ್ಲಿ ಜಯನ್ ವಿರುದ್ಧ ಕೇಸು ದಾಖಲಿಸಿ ಸೆರೆಹಿಡಿದ ಬಳಿಕ ಡಿವೈಎಫ್‌ಐ ಕಾರ್ಯಕರ್ತರು ಕೇಂದ್ರಕ್ಕೆ ಹಾನಿಗೈದಿದ್ದಾರೆ. ಈ ಹಿಂದೆಯೂ ಈ ಕೇಂದ್ರವನ್ನು ಹಾನಿಗೈಯ್ಯಲಾಗಿತ್ತು.