ನಗರದಲ್ಲಿ ನಾಲ್ಕು ಅಂಗಡಿಗಳಲ್ಲಿ ಕಳವು : ಕಳ್ಳರ ಸಿಸಿ ಟಿವಿ ದೃಶ್ಯ, ಬೆರಳಚ್ಚು ಪತ್ತೆ

ಕಾಸರಗೋಡು: ಕಾಸರಗೋಡು ನಗರದಲ್ಲಿ ಕಳ್ಳರ ತಂಡ ಬೀಡು ಬಿಟ್ಟಿವೆ. ಮೊನ್ನೆ ರಾತ್ರಿ ನಗರದ ನಾಲ್ಕು ಅಂಗಡಿ ಗಳಿಗೆ ಕಳ್ಳರು ನುಗ್ಗಿ ಕಳವು ನಡೆಸಿದ್ದಾರೆ.

ನಗರದ ಕರಂದಕ್ಕಾಡ್‌ನಲ್ಲಿರುವ ಕಂಬಾರಿನ ಅಬ್ದುಲ್ ನಿಜಾರ್ ಎಂಬ ವರ ಸಿಟಿ ಕೂಲ್ ಎಂಬ ಹೆಸರಿನ ಇಲೆ ಕ್ಟ್ರೋನಿಕ್ಸ್ ಸಾಮಗ್ರಿಗಳ ಮಾರಾಟ ದಂಗಡಿಯ ಶೆಟರ್ ಎಳೆದು ಬಗ್ಗಿಸಿ ಒಳನುಗ್ಗಿದ ಕಳ್ಳರು ಅಲ್ಲಿಂದ 30,000 ರೂ. ನಗದು ಹಾಗೂ 10,000 ರೂ. ಮೌಲ್ಯದ ಮಿಕ್ಸಿಯೊಂದನ್ನು  ಕಳ ಗೈದಿದ್ದಾರೆ.  ತೆರುವತ್ತ್ ನಿವಾಸಿ ಕೆ.ಎಂ ಮೊಹಮ್ಮದ್ ಶಂಶೀರ್ ಎಂಬವರು ನಡೆಸುತ್ತಿರುವ  ತಾಯಿಲಂಗಾಡಿಯ ಚಿಲ್ಲೀಸ್ ಹೈಪರ್ ಮಾರ್ಕೆಟ್‌ಗೆ ಕಳ್ಳರು ನುಗ್ಗಿ 55,000 ರೂ. ನಗದನ್ನು ದೋಚಿದ್ದಾರೆ.

ಇದರ ಹೊರತಾಗಿ ಕಾಸರ ಗೋಡು ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಮಲಪ್ಪುರಂ ನಿವಾಸಿ  ಮೊಹಮ್ಮದ್ ಕುಟ್ಟಿ ಎಂಬ ವರ ಮಾಲಕತ್ವದಲ್ಲಿರುವ ಅಜ್‌ಫಾನ್ ಎಂಬ ಡ್ರೈಪ್ರೂಟ್ಸ್ ಅಂಗಡಿ ಮತ್ತು ಅಲ್ಲೇ ಎದುರುಗಡೆ ಎ.ಟಿ. ರಸ್ತೆ ತಿರುವಿನಲ್ಲಿ ಕಾರ್ಯವೆಸಗುತ್ತಿರುವ ಪುಟ್ಟ ಮಕ್ಕಳ ಬಟ್ಟೆ ಬರೆ ಮಾರಾಟ ಕೇಂದ್ರವಾದ ಚೇರಂಗೈಯ ಇಕ್ಭಾಲ್ ಎಂಬವರ ಬೇಬಿ ಕ್ಯಾಂಪ್ ಅಂಗಡಿ ಯಲ್ಲೂ ಕಳವು ಯತ್ನ ನಡೆದಿದೆ.

ಈ ಕಳವು ನಡೆಸಿದ ಸಿಸಿ ಟಿವಿ ಕ್ಯಾಮರಾ ದೃಶ್ಯಗಳು ಪೊಲೀಸರಿಗೆ ಲಭಿ ಸಿದೆ. ಇದರಲ್ಲಿ ಮುಖವನ್ನು ಬಟ್ಟೆಯಿಂದ ಮುಚ್ಚಿದ ಮೂವರು ಕಳ್ಳರ  ದೃಶ್ಯಗಳು ಪತ್ತೆಯಾಗಿವೆ. ಬೆರಳಚ್ಚು ತಜ್ಞರು ನಡೆಸಿದ ಪರಿಶೀಲನೆಯಲ್ಲಿ ಕಳ್ಳರದ್ದೆನ್ನಲಾಗುವ ಬೆರಳಚ್ಚುಗಳೂ ಲಭಿಸಿವೆ. ಅದರ ಜಾಡು ಹಿಡಿದು ಪೊಲೀಸರು ತನಿಖೆ ಆರಂಭಿಸಿ ದ್ದಾರೆ. ಬೇಬಿ ಕ್ಯಾಂಪ್ ಮತ್ತು ಅಜ್‌ಫಾನ್ ಅಂಗಡಿಗಳ ಶಟರ್ ಗಳನ್ನು ಹಿಡಿದೆಳೆದು ಬಗ್ಗಿಸಿದರೂ ಕಳ್ಳರಿಗೆ ಅದರೊಳಗೆ ಪ್ರವೇಶಿ ಸಲು ಸಾಧ್ಯವಾಗಲಿಲ್ಲ. ಅದರಿಂದಾಗಿ ಆ ಎರಡು ಅಂಗಡಿಗಳಿಂದ ಯಾವುದೇ ಸಾಮಾಗ್ರಿಗಳು ಕಳವುಹೋಗಿಲ್ಲ ವೆಂದು ಪ್ರಸ್ತುತ ಅಂಗಡಿಯವರು ತಿಳಿಸಿದ್ದಾರೆ.

ರಾತ್ರಿ ವೇಳೆ ಪೋಲಿಸ್ ಗಸ್ತು ತಿರುಗು ವಿಕೆ  ಇಲ್ಲದ ಸಮಯ ನೋಡಿಕೊಂಡು ಕಳವು ನಡೆಸುತ್ತಿದ್ದಾರೆ. ಮಳೆಗಾಲ ಆರಂಭಗೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ಕಳವು ಪ್ರಕರಣಗಳೂ ಹೆಚ್ಚಾಗತೊಡಗಿವೆ. 

Leave a Reply

Your email address will not be published. Required fields are marked *

You cannot copy content of this page