ನಗರಸಭಾ ಅಧ್ಯಕ್ಷ ಸ್ಥಾನದ ಜತೆಗೆ ಕೌನ್ಸಿಲರ್ ಸ್ಥಾನಕ್ಕೂ ರಾಜೀನಾಮೆ ನೀಡಿದ ವಿ.ಎಂ. ಮುನೀರ್

ಕಾಸರಗೋಡು: ನಿರೀಕ್ಷೆಯಂತೆ ಮುಸ್ಲಿಂ ಲೀಗ್‌ನ  ನ್ಯಾ. ವಿ.ಎಂ. ಮುನೀರ್ ಕೊನೆಗೂ ಕಾಸರಗೋಡು ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಚ್ಚರಿ ಎಂಬಂತೆ ಅವರು ಇದರ ಜೊತೆಗೆ ತಮ್ಮ ಕೌನ್ಸಿಲರ್ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.

ಇದರಿಂದಾಗಿ ಕಾಸರಗೋಡು ನಗರಸಭೆಯಲ್ಲಿ ಮುಸ್ಲಿಂ ಲೀಗ್ ಸದಸ್ಯರ ಸಂಖ್ಯೆ ಈಗ ೨೧ರಿಂದ ೨೦ಕ್ಕಿಳಿದಿದೆ. ಬಿಜೆಪಿ-೧೪,  ಇಬ್ಬರು ಪಕ್ಷೇತರರು ಮತ್ತು ಸಿಪಿಎಂನ ಓರ್ವ ಸದಸ್ಯರನ್ನು ನಗರಸಭೆ ಹೊಂದಿದೆ. ಮನೀರ್‌ರ ಈ ರಾಜೀನಾಮೆಯಿಂದ ಅದು ನಗರ ಸಭೆಯಲ್ಲಿ ಮುಸ್ಲಿಂಲೀಗ್‌ಗೆ ಪ್ರತಿಕೂಲ ಕರವಾಗದು. ವಿ.ಎಂ. ಮುನೀರ್ ಕಾಸರಗೋಡು ನಗರಸಭಾ ಕಾರ್ಯ ದರ್ಶಿ ಪಿ.ಎ. ಜಸ್ಟಿನ್ ಅವರನ್ನು ನಿನ್ನೆ ಸಂದರ್ಶಿಸಿ ಅವರು ತಮ್ಮ ನಗರಸಭಾ ಅಧ್ಯಕ್ಷ ಸ್ಥಾನದ ಜತೆಗೆ ಕೌನ್ಸಿಲರ್ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದರು.

ನಗರಸಭೆಯ ೨೪ನೇ ವಾರ್ಡ್ (ತಳಂಗರೆ ಖಾಸೀಲೈನ್)ನಲ್ಲಿ ಕಳದ ಚುನಾವಣೆಯಲ್ಲಿ  ಮುನೀರ್ ೧೨೩ ಮತಗಳ ಅಂತರದಲ್ಲಿ ಗೆದ್ದು ನಗರಸಭಾ ಕೌನ್ಸಿಲರ್ ಆಗಿ ಆಯ್ಕೆಗೊಂಡಿದ್ದರು. ೨೦೨೦ ಡಿಸೆಂಬರ್ ೨೮ರಂದು ಅವರು ಕಾಸರಗೋಡು ನಗರಸಭಾ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.  ಮುಸ್ಲಿಂ ಲೀಗ್‌ನ  ಜಿಲ್ಲಾ ಸಮಿತಿ ಚುನಾವಣೆ ವೇಳೆ ಕೈಗೊಂಡ ತೀರ್ಮಾನದಂತೆ ನಗರಸಭಾ ಅಧ್ಯಕ್ಷ ಸ್ಥಾನವನ್ನು ಮೊದಲ ಎರಡೂವರೆ ವರ್ಷ ವಿ.ಎಂ. ಮುನೀರ್, ನಂತರದ ಎರಡೂವರೆ ವರ್ಷ ನಗರಸಭೆಯ ಎರಡನೇ   (ಚೇರಂಗೈ ಈಸ್ಟ್) ವಾರ್ಡ್‌ನಿಂದ ಗೆದ್ದ ಅಬ್ಬಾಸ್ ಬೀಗಂರಿಗೆ ವಹಿಸಿಕೊಡುವ ಒಪ್ಪಂದಕ್ಕೆ ಬರಲಾಗಿತ್ತು. ಅದರಂತೆ ಮುನೀರ್ ಎರಡು ದಿನಗಳ ಹಿಂದೆಯೇ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಅವರ ರಾಜೀನಾಮೆ ವಿಷಯ ಮುಸ್ಲಿಂ ಲೀಗ್ ಕಾರ್ಯಕರ್ತರಲ್ಲಿ ಭಿನ್ನಮತ ವ್ಯಕ್ತವಾಗಿತ್ತು. ಅದರಿಂದಾಗಿ ರಾಜೀನಾಮೆ ಎರಡು ದಿನ ವಿಳಂಬ ಗಂಡಿತ್ತು. ವಿ.ಎಂ. ಮುನೀರ್ ಪ್ರತಿನಿ ಧೀಕ ರಿಸಿದ್ದ ೨೪ನೇ ವಾರ್ಡ್‌ನ ಮುಸ್ಲಿಂ ಲೀಗ್ ಸಮಿತಿಯ ಕಾರ್ಯಕರ್ತರ ಆಗ್ರಹ ಪ್ರಕಾರ ಮುನೀರ್ ತಮ್ಮ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರ ಹಿನ್ನೆಲೆಯಾಗಿದೆ. ಎಂದು ತಿಳಿಯಲಾಗಿದೆ.

ಮುನೀರ್ ರಾಜೀನಾಮೆ ಬೆನ್ನಲ್ಲೇ ಅವರು ಪ್ರತಿನಿಧೀಕರಿಸುತ್ತಿದ್ದ ೨೪ನೇ ವಾರ್ಡ್‌ನ ಮುಸ್ಲಿಂ ಲೀಗ್ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಭಾಲ್ ಮಡ್ಗ, ಕಾರ್ಯದರ್ಶಿಗಳಾದ ನವಾಸ್, ಮುಸಾಮಿಲ್, ಉಪಾಧ್ಯಕ್ಷ ಹಕೀಂ ತಾಯಲಂಗಾಡಿ ಕೂಡಾ ಪಕ್ಷದ ತಮ್ಮ  ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಕಾಸರಗೋಡು ನಗರಸಭೆಯ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು   ನಗರಸಭಾ ಉಪಾಧ್ಯಕ್ಷೆಯಾಗಿರುವ ಶಂಶೀದಾ ಫಿರೋಸ್‌ರಿಗೆ ವಹಿಸಿಕೊಡ ಲಾಗಿದೆ. ಈಗ ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿರುವ ಅಬ್ಬಾಸ್ ಬೀಗಂ ಈ ತಿಂಗಳೊಳಗಾಗಿ ನಗರ ಸಭೆಯ ಹೊಸ ಅಧ್ಯಕ್ಷರಾಗಿ ಆಯ್ಕೆ ಗೊಳ್ಳಲಿದ್ದಾರೆ. ವಿ.ಎಂ. ಮುನೀರ್ ನಗರಸಭಾ ಕೌನ್ಸಿಲ್ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರು ಪ್ರತಿನಿಧೀಕರಿಸಿದ್ದ ೨೪ನೇ ವಾರ್ಡ್‌ಗೆ ಮುಂದಿನ ಆರು ತಿಂಗ ಳಳಗಾಗಿ ಉಪಚುನಾವಣೆ ನಡೆಸ ಬೇಕಾಗಿದೆ.  ಆದರೆ ಮುನೀರ್ ಕೌನ್ಸಿ ಲರ್ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಪಕ್ಷದೊಂದಿಗೆ ಯಾವುದೇ ರೀತಿಯ ಪೂರ್ವಸಮಾಲೋಚನೆಯನ್ನು ನಡೆಸಿಲ್ಲವೆಂದು ಮುಸ್ಲಿ ಲೀಗ್ ಜಿಲ್ಲಾ ನೇತಾರರು ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page