ನಗರ ಬಂಟರ ಸಂಘದ ಅಧ್ಯಕ್ಷ ಕೊರಗಪ್ಪ ಶೆಟ್ಟಿ ನಿಧನ
ಕಾಸರಗೋಡು: ಕಾಸರಗೋಡು ನಗರ ಬಂಟರ ಸಂಘದ ಅಧ್ಯಕ್ಷ ನೆಲ್ಲಿಕುಂಜೆ ಬಂಗರಗುಡ್ಡೆ ಶ್ರೀನಿಲಯದ ಕೊರಗಪ್ಪ ಶೆಟ್ಟಿ (84) ಇಂದು ಬೆಳಿಗ್ಗೆ ನಿಧನ ಹೊಂದಿದರು. ವೃದ್ಧಾಪ್ಯ ಸಹಜ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಕರ್ನಾಟಕ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಯಾಗಿದ್ದ ಅವರು ಕಾಸರಗೋಡು ವಲಯ ಬಂಟರ ಸಂಘ ಹಾಗೂ ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿದ್ದರು. ಅಲ್ಲ್ಲದೆ ಉಪ್ಪಳ ಮುಳಿಂಜ ಕುಂಟುಪುಣಿ ತರವಾಡಿನ ಹಿರಿಯ ವ್ಯಕ್ತಿಯೂ ಆಗಿದ್ದರು.
ಮೃತರು ಪತ್ನಿ ಸುಹಾಸಿನಿ, ಮಕ್ಕಳಾದ ಪ್ರವೀಣ್, ಭಾರತಿ, ವಿಜಯಲಕ್ಷ್ಮಿ, ಅಳಿಯಂದಿರಾದ ಪ್ರಮೋದ್ ರೈ, ಚಂದ್ರಹಾಸ ಶೆಟ್ಟಿ, ಸಹೋದರರಾದ ಕುಂಞ್ಞಣ್ಣ ಶೆಟ್ಟಿ, ರಾಮಣ್ಣ ಶೆಟ್ಟಿ, ಸಹೋದರಿ ರತ್ನಾವತಿ ಆಳ್ವ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರಿಯರಾದ ಚೋಮಕ್ಕೆ, ಸಂಜೀವಿ, ಸರೋಜಿನಿ ಈ ಹಿಂದೆ ನಿಧನಹೊಂದಿದ್ದಾರೆ.