ನಗ್ನ ಫೋಟೋ ಪ್ರಚಾರ ಮಾಡುವುದಾಗಿ ಬೆದರಿಸಿ 10,05,000 ರೂ. ಎಗರಿಸಿದ ಬಗ್ಗೆ ದೂರು
ಬದಿಯಡ್ಕ: ವಾಟ್ಸಪ್ನಲ್ಲಿ ನಗ್ನ ಫೋಟೋ ಹಾಗೂ ವೀಡಿಯೋ ಚಿತ್ರಗಳನ್ನು ಪ್ರಚಾರ ಮಾಡುವುದಾಗಿ ಬೆದರಿಸಿ ಯುವಕನೋರ್ವನಿಂದ 10,05,000 ರೂ. ಎಗರಿಸಿರುವುದಾಗಿ ಆರೋಪಿಸಿ ಯುವಕನೋರ್ವ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾನೆ. ಅದರಂತೆ ದಕ್ಷಿಣಕನ್ನಡ ಜಿಲ್ಲೆಯ ಗುರುಪುರದ ಅಶ್ವತ್ಥ್ ಆಚಾರ್ಯ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2024 ನವಂಬರ್ನಲ್ಲಿ ವಾಟ್ಸಪ್ ಮೂಲಕ ನಾನು ಆರೋಪಿಯನ್ನು ಪರಿಚಯಗೊಂಡಿದ್ದೆ ನೆಂದೂ ಆ ಸೌಹಾರ್ದದಲ್ಲಿ ಆತನಿಗೆ ನಾನು ಕೆಲವೊಂದು ನಗ್ನ ಫೋಟೋ ಕಳುಹಿಸಿಕೊಟ್ಟಿದ್ದೆ ಮಾತ್ರವಲ್ಲ ವೀಡಿಯೋ ಚಾಟಿಂಗ್ ಕೂಡಾ ನಡೆಸಿದ್ದೆ. ಅದನ್ನೆಲ್ಲಾ ತನಗೆ ತಿಳಿಯದೆ ಆರೋಪಿ ರೆಕಾರ್ಡ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಮಾಡುವುದಾಗಿ ಬೆದರಿಸಿ 2024 ನವಂಬರ್ 26ರಿಂದ ಆರಂಭಗೊAಡು 2024 ಡಿಸೆಂಬರ್ 4ರ ತನಕದ ಅವಧಿಯಲ್ಲಿ ಗೂಗಲ್ ಹಾಗೂ ಅಕೌಂಟ್ ಟ್ರಾನ್ಸ್ಫರ್ ಮೂಲಕ ಹಲವು ಬಾರಿಯಾಗಿ ತನ್ನಿಂದ 10,05,000 ರೂ. ಪಡೆದು ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಯುವಕ ಆರೋಪಿಸಿದ್ದಾನ.