ನಯನ ಗಿರೀಶ್‌ರಿಗೆ ಬದಿಯಡ್ಕದಲ್ಲಿ ಅಭಿನಂದನೆ
ಬದಿಯಡ್ಕ: ಕನ್ನಡ ಹೋರಾಟಗಾರ್ತಿ ನಯನ ಗಿರೀಶ್ ಅಡೂರು ಅವರನ್ನು ಕ.ಸಾ.ಪ. ಗಡಿನಾಡ ಘಟಕ ಮತ್ತು ಸಮತಾ ಸಾಹಿತ್ಯ ವೇದಿಕೆ ಇದರ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಅಭಿನಂದಿಸಲಾಯಿತು. ಅಡೂರು ಸರಕಾರಿ ಹೈಸ್ಕೂಲಿನ ಕನ್ನಡ ಮಾಧ್ಯಮ ಅಧ್ಯಾಪಕ ಹುದ್ದೆಗೆ ಕನ್ನಡವರಿಯದ ಮಲೆಯಾಳ ಶಿಕ್ಷಕಿಯನ್ನು ನೇಮಿಸಿದಾಗ ಮತ್ತು ಕೋರಿಕಂಡ ಅಂಗನವಾಡಿ ಮಕ್ಕಳಿಗೆ ಮಲೆಯಾಳಿ ಶಿಕ್ಷಕಿಯನ್ನು ನೇಮಿಸಿದ ವಿರುದ್ಧ ಹೋರಾಟ ನಡೆಸಿದ್ದರು. ಹೈಕೋರ್ಟ್‌ಗೆ ದಾವೆ ಹೂಡಿ ಕನ್ನಡ ಶಿಕ್ಷಕಿಯರನ್ನು ನೇಮಕಗೊಳಿಸುವಂತೆ ಆದೇಶ ಪಡೆಯುವಲ್ಲಿ ನಯನ ಗಿರೀಶ್ ಯಶಸ್ವಿಯಾಗಿದ್ದರು. ಈ ಬಗ್ಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ನಯನ ಗಿರೀಶ್‌ರನ್ನು ಅಭಿನಂದಿಸಿದರು.
ಕ.ಸಾ.ಪ. ಗೌರವ ಕಾರ್ಯದರ್ಶಿ ಶೇಖರ್ ಶೆಟ್ಟಿ ಬಾಯಾರು, ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ನ್ಯಾಯವಾದಿ ಥೋಮಸ್ ಡಿಸೋಜಾ, ಆಯಿಶಾ ಎ. ಪೆರ್ಲ, ಡಾ. ಸುಭಾಷ್ ಪಟ್ಟಾಜೆ, ದಿವ್ಯಾ ಗಟ್ಟಿ ಪರಕ್ಕಿಲ, ಸುಂದರ ಬಾರಡ್ಕ, ರಾಮ ಪಟ್ಟಾಜೆ, ಕೃಷ್ಣ ಡಿ, ಉದಯ ಕುಮಾರ್, ವನಜಾಕ್ಷಿ ಚಂಬ್ರಕಾನ, ಸುಭಾಷ್ ಪೆರ್ಲ ಉಪಸ್ಥಿತರಿದ್ದರು.