ನರಹತ್ಯಾ ಯತ್ನ: ಪೊಲೀಸ್ ಚಾಲಕ ಸೆರೆ; ನ್ಯಾಯಾಂಗ ಬಂಧನ
ಬದಿಯಡ್ಕ: ಬೇಳ ತೈವಳಪ್ಪಿನ ಬಿ. ಸುಜಾತ (40)ರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ವಿದ್ಯಾನಗರ ಪೊಲೀಸ್ ಠಾಣೆಯ ವಾಹನ ಚಾಲಕ ವೈ. ಬೈಜು (40)ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಪೊಲೀಸರು ನರಹತ್ಯಾಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತನನ್ನು ನಂತರ ನ್ಯಾಯಾ ಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ದೂರು ದಾರಳಾದ ಸುಜಾತ ಮತ್ತು ಬೈಜು ವರ್ಷಗಳಿಂದ ಪತಿ ಪತ್ನಿಯರ ಹಾಗೆ ಜೊತೆಗೆ ವಾಸಿಸುತ್ತಿದ್ದರು. ಕಳೆದ ಸೋಮವಾರ ತನ್ನ ಮೇಲೆ ಬೈಜು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಸುಜಾತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಬೈಜು ವಿರುದ್ಧ ಕೇಸು ದಾಖ ಲಿಸಿಕೊಂಡಿದ್ದಾರೆ.