ನರ್ಸಿಂಗ್ ವಿದ್ಯಾರ್ಥಿನಿ ವಿಷ ಸೇವಿಸಿ ಮೃತ್ಯು

ಬದಿಯಡ್ಕ: ನರ್ಸಿಂಗ್ ವಿದ್ಯಾರ್ಥಿನಿಯೋರ್ವೆ ವಿಷ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ. ನಾರಂಪಾಡಿ ಬಳಿಯ ಪಿಲಿಕೂಡ್ಲು ನಿವಾಸಿ  ಮಾಲಿಂಗ ನಾಯ್ಕ ಎಂಬವರ ಪುತ್ರಿ ಅಂಕಿತ (೧೮) ಮೃತಪಟ್ಟ ಯುವತಿ. ಈಕೆ ಕಾಸರಗೋಡಿನ ಸಂಸ್ಥೆಯೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಳು. ಕಳೆದ ಶನಿವಾರ ಈಕೆ ಮನೆಯಲ್ಲಿ ವಿಷ ಸೇವಿಸಿದ್ದಳೆನ್ನಲಾಗಿದೆ. ಆದರೆ ಆ ಬಗ್ಗೆ ಮನೆಯವರಿಗೆ ತಿಳಿದಿರಲಿಲ್ಲ. ಸೋಮವಾರ ಆಕೆ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಿ ಬಳಿಕ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ಮೃತಪಟ್ಟಳು. ವಿಷ ಸೇವಿಸಲು ಕಾರಣವೇನೆಂದು ತಿಳಿದು ಬಂದಿಲ್ಲ. ಮೃತಳು ತಾಯಿ ಶಾಂಭವಿ, ಸಹೋದರರಾದ ಅವಿನಾಶ್, ನಿತಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page