ನಲ್ಲೆಂಗಿಪದವು: ಪುನರ್ ಪ್ರತಿಷ್ಠಾ ನವೀಕರಣ ಕಲಶ ಮಹೋತ್ಸವ ಆರಂಭ
ವರ್ಕಾಡಿ: ನಲ್ಲೆಂಗಿಪದವು ಶ್ರೀ ಕರಿಂಕಾಳಿ ದೈವಸ್ಥಾನದಲ್ಲಿ ಕರಿಂಕಾಳಿ ದೇವಿ, ಶ್ರೀ ಗಣಪತಿ ದೇವರ ಮತ್ತು ಪರಿವಾರ ದೈವ, ದೇವರುಗಳ ಪುನರ್ ಪ್ರತಿಷ್ಠಾ ನವೀಕರಣ ಕಲಶ ಮಹೋತ್ಸವ ವಿವಿಧ ಕಾರ್ಯಕ್ರ ಮಗಳೊಂದಿಗೆ ನಿನ್ನೆಯಿಂದ ಆರಂಭಗೊಂಡಿದೆ. ನಾಳೆ ಸಮಾಪ್ತಿಯಾಗಲಿದೆ. ಇಂದು ಬೆಳಿಗ್ಗೆ ಗಣಪತಿಹೋಮ, ಅನುಜ್ಞಾ ಕಲಶ ಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ನಾಳೆ ಮುಂಜಾನೆ 3.30ರಿಂದ ಗಣಪತಿಹೋಮ, ಪ್ರಸಾದ ಪ್ರತಿಷ್ಠೆ, ಬ್ರಹ್ಮಕಲಶ ಪೂಜೆ, ಆದಿವಾಸ ಬಿಂಬ ಪೂಜೆ, ಬೆಳಿಗ್ಗೆ ೬ರಿಂದ ಶ್ರೀದೇವಿ ಮತ್ತು ಗಣಪತಿ ದೇವರ ಹಾಗೂ ಪರಿವಾರ ದೈವ, ದೇವರುಗಳ ಪ್ರತಿಷ್ಠೆ, ಜೀವ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.