ನವಕೇರಳ ಸದಸ್ಸ್: ಕಾಸರಗೋಡು ಮಂಡಲ ಸ್ವಾಗತ ಸಮಿತಿ ರಚನೆ

ಕಾಸರಗೋಡು: ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳು, ಮುಂದಿನ ಅಭಿವೃದ್ಧಿ ದೃಷ್ಟಿಕೋನಗಳನ್ನು ಜನರಿಗೆ ತಲುಪಿಸಲು ಜನರೊಂದಿಗೆ ಚರ್ಚಿಸಲು ರಾಜ್ಯದ ೧೪೦ ಮಂಡಲಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರುಗಳ ನೇತೃತ್ವದಲ್ಲಿ ನಡೆಸುವ ನವಕೇರಳ ಸದಸ್ಸ್ ಈ ತಿಂಗಳ ೧೯ರಂದು ಬೆಳಿಗ್ಗೆ ಕಾಸರಗೋಡು ಮಂಡಲದಲ್ಲಿ ನಡೆಯಲಿದೆ. ಇದರ ಯಶಸ್ವಿಗೆ ಸ್ವಾಗತ ಸಮಿತಿ ರೂಪೀಕರಣ ಸಭೆ ನಗರಸಭಾ ಪುರಭವನದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಅಧ್ಯಕ್ಷತೆ ವಹಿಸಿದರು. ರಾಜ್ಯ ಬಂದರು ಖಾತೆ ಸಚಿವ ಅಹಮ್ಮದ್ ದೇವರ್ ಕೋವಿಲ್, ಜಿಲ್ಲಾಧಿಕಾರಿ ಕೆ. ಇಂಬಶೇಖರ್, ನವಕೇರಳ ಸದಸ್ಸ್‌ನ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ, ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯು  ಉಪಾಧ್ಯಕ್ಷರುಗಳಾಗಿಯೂ, ಎಡಿಎಂ ಕೆ. ನವೀನ್ ಬಾಬು ಸಂಚಾಲಕರಾಗಿ, ಜಿಲ್ಲಾ ಕೈಗಾರಿಕಾ ಕೇಂದ್ರ ಜನರಲ್ ಮೆನೇಜರ್ ಕೆ. ಸಜಿತ್ ಕುಮಾರ್, ಜೋಯಿಂಟ್ ಕನ್ವೀನರ್‌ಗಳಾಗಿಯೂ ಸಮಿತಿ ರೂಪೀಕರಿಸಲಾಯಿತು. ಇದರ ಜೊತೆಗೆ ವಿವಿಧ ಉಪ ಸಮಿತಿಗಳನ್ನು ರೂಪೀಕರಿಸಲಾಯಿತು. ಹಲವರು ಮಾತನಾಡಿದರು. ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು, ಸಾಂಸ್ಕೃತಿಕ ಸಾಮಾಜಿಕ ರಂಗದ ಗಣ್ಯರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page