‘ನವಕೇರಳ ಸಭೆ’ ನ.೧೮ರಂದು ಪೈವಳಿಕೆಯಲ್ಲಿ ಮುಖ್ಯಮಂತ್ರಿ ಉದ್ಘಾಟನೆ: ಸ್ವಾಗತಸಮಿತಿಗೆ ರೂಪು
ಮಂಜೇಶ್ವರ: ಮುಖ್ಯಮಂತ್ರಿ ಮತ್ತು ರಾಜ್ಯದ ಸಚಿವರುಗಳ ನೇತೃತ್ವದಲ್ಲಿ ನಡೆಯುವ ನವಕೇರಳ ಸಭೆ ಕಾರ್ಯಕ್ರಮದ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಮಟ್ಟದ ಕಾರ್ಯ ಕ್ರಮ ಅಕ್ಟೋಬರ್ ೧೮ರಂದು ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸು ವರು. ಹಲವರು ಸಚಿವರುಗಳು ಭಾಗವಹಿಸುವರು. ಕಾರ್ಯಕ್ರಮದ ಯಸ್ವಿಗಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ರನ್ನು ಅಧ್ಯಕ್ಷರಾಗಿ ಯೂ, ಆರ್ಡಿಒ ಅತುಲ್ ಸ್ವಾಮಿ ನಾಥ್ ಸಂಚಾಲಕರಾಗಿ ಹಾಗೂ ಇತರ ಆರು ಮಂದಿ ಸದಸ್ಯರನ್ನು ಒಳಗೊಂಡ ಸಮಿತಿಗೆ ರೂಪು ನೀಡಲಾಗಿದೆ. ಮಾತ್ರವಲ್ಲ ಜನಪ್ರತಿ ನಿಧಿಗಳು, ಮತ್ತು ಅಧಿಕಾರಿ ಗಳನ್ನು ಇದರ ಸಂಚಾಲಕರನ್ನಾಗಿ ಉಪ ಸಮಿತಿಗೂ ರೂಪು ನೀಡಲಾಗಿದೆ. ಪಂ ಚಾಯತ್ ಅಧ್ಯಕ್ಷರುಗಳಾದ ಸುಬ್ಬಣ್ಣ ಆಳ್ವ (ಪುತ್ತಿಗೆ), ಕೆ. ಜಯಂತಿ (ಪೈವಳಿಕೆ) ಎಸ್. ಭಾರತಿ (ವರ್ಕಾಡಿ), ಜೀನ್ ಲವಿನಾ ಮೊಂತೇರೋ (ಮಂಜೇಶ್ವರ), ಸುಂದರಿ ಆರ್. ಶೆಟ್ಟಿ (ಮೀಂಜ) ಎಂಬಿವರನ್ನು ಉಪಾಧ್ಯಕ್ಷರುಗಳನ್ನಾಗಿ ಪಂಚಾಯತ್ ಮಟ್ಟಗಳ ಸ್ವಾಗತ ಸಮಿತಿ ಗಳಿಗೂ ರೂಪು ನೀಡಲಾಗಿದೆ. ತುಳು ಅಕಾ ಡೆಮಿಯ ಅಧ್ಯಕ್ಷ ಕೆ.ಆರ್. ಜಯಾನಂದ, ಬಿ.ವಿ. ರಾಜನ್, ಎಡಿಎಂಕೆ ನವೀನ್ ಬಾಬು, ಆರ್ಡಿಒ ಅತುಲ್ ಸ್ವಾಮಿನಾಥನ್ ಮಾತನಾಡಿದರು.