ನವಕೇರಳ ಸಭೆ: ೧೮, ೧೯ರಂದು ಮುಖ್ಯಮಂತ್ರಿ, ಸಚಿವರು ಜಿಲ್ಲೆಯಲ್ಲಿ

ಕಾಸರಗೋಡು:  ರಾಜ್ಯ ಸರಕಾರದ ಅಭಿವೃದ್ಧಿ ಸಾಧನೆಗಳು, ಭವಿಷ್ಯದ ಯೋಜನೆಗಳ ಕುರಿತು ಸಾರ್ವಜನಿಕರೊಂದಿಗೆ ಸಂವಾದ ನಡೆಸುವ ಅಂಗವಾಗಿ ರಾಜ್ಯದಲ್ಲಿ ಹಮ್ಮಿಕೊಂಡ ನವಕೇರಳ ಸಭೆ ಕಾಸರಗೋಡು ಜಿಲ್ಲೆಯಲ್ಲಿ ನ. ೧೮ ಹಾಗೂ ೧೯ರಂದು ನಡೆಯಲಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಸಚಿವರು ಭಾಗವಹಿಸಲಿರುವ ಈ ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಸಭೆ ೧೮ರಂದು ಮಧ್ಯಾಹ್ನ ೨ ಗಂಟೆಗೆ  ಪೈವಳಿಕೆ ನಗರ ಶಾಲೆಯ ವಠಾರದಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ೩.೩೦ಕ್ಕೆ ಮುಖ್ಯಮಂತ್ರಿ ಹಾಗೂ ಸಚಿವರು ಸಾರ್ವಜನಿಕರೊಂದಿಗೆ ಸಂವಾದ ನಡೆಸುವರು.

೧೯ರಂದು ಬೆಳಿಗ್ಗೆ ೯ ಗಂಟೆಗೆ ಕಾಸರಗೋಡು ಸಂಧ್ಯಾರಾಗಂ ಆಡಿಟೋರಿಯಂನಲ್ಲಿ ಜಿಲ್ಲೆಯ ವಿವಿಧ ವಲಯಗಳ ಪ್ರಮುಖರು ಭಾಗವಹಿಸುವ ಸಭೆ ನಡೆಯಲಿರುವುದು. ಬಳಿಕ ೧೦ ಗಂಟೆಗೆ ಕಾಸರಗೋಡು ವಿಧಾನಸಭಾ ಕ್ಷೇತ್ರ ನವಕೇರಳ ಸಭೆ ಚೆಂಗಳ ಪಂಚಾಯತ್ ಸ್ಟೇಡಿಯಂ ವೇದಿಕೆಯಲ್ಲಿ ನಡೆಯಲಿದೆ. ಅಲೋಶಿಯವರ ಸಮೂಹಗಾನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ೧೧ ಗಂಟೆಗೆ ಸಂವಾದ ನಡೆಯಲಿದೆ. ಬಳಿಕ ಉದುಮ ವಿಧಾನಸಭಾ ಕ್ಷೇತ್ರ ನವಕೇರಳ ಸಭೆ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿರುವುದು. ಮಧ್ಯಾಹ್ನ ೧ ಗಂಟೆಗೆ ಪ್ರಸೀದ ಚಾಲಕ್ಕುಡಿ ಅವರ ಜಾನಪದ ಹಾಡು, ಅಪರಾಹ್ನ ೩ ಗಂಟೆಗೆ ಮುಖ್ಯಮಂತ್ರಿ ಹಾಗೂ ಸಚಿವರು ಸಾರ್ವಜನಿಕರೊಂದಿಗೆ ಸಂವಾದ ನಡೆಸುವರು.

ಕಾಞಂಗಾಡ್ ಮಂಡಲ ನವಕೇರಳ ಸಭೆ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಪರಾಹ್ನ ೩ರಿಂದ ನಡೆಯಲಿದೆ. ತೃಕ್ಕರಿಪುರ ವಿಧಾನಸಭಾ ಕ್ಷೇತ್ರ ಸಭೆ ಅಂದು ಸಂಜೆ ೫ಕ್ಕೆ ಕಾಲಿಕ್ಕಡವ್ ಮೈದಾನದಲ್ಲಿ ನಡೆಯಲಿದೆ. ೬ ಗಂಟೆಗೆ ಮುಖ್ಯಮಂತ್ರಿ ಹಾಗೂ ಸಚಿವರು ಸಾರ್ವಜನಿಕರೊಂದಿಗೆ ಸಂವಾದ ನಡೆಸುವರು. ನವಕೇರಳ ಸಭೆಯ ಎಲ್ಲಾ ವೇದಿಕೆಗಳಲ್ಲೂ ಪ್ರತ್ಯೇಕ ಸಿದ್ಧಪಡಿಸಲಾದ ಕೌಂಟರ್‌ಗಳಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಾಗುವುದು.

Leave a Reply

Your email address will not be published. Required fields are marked *

You cannot copy content of this page