ನವಜೀವನ ಶಾಲಾ ವಿದ್ಯಾರ್ಥಿಗಳಿಂದ ವಿಜಯೋತ್ಸವ ಮೆರವಣಿಗೆ

ಬದಿಯಡ್ಕ: ಪೆರಡಾಲ ನವ ಜೀವನ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಕುಂಬಳೆ ಉಪಜಿಲ್ಲಾ ವಿಜ್ಞಾ ನೋತ್ಸವದಲ್ಲಿ ಅತಿಥೇಯ ನವಜೀವನ ಶಾಲೆಯು ೬೩೧ ಅಂಕಗಳೊಂದಿಗೆ ಪ್ರಥಮಸ್ಥಾನದಲ್ಲಿ ಸಮಗ್ರ ಪ್ರಶಸ್ತಿಗೆ ಪಾತ್ರವಾಗಿದ್ದು, ಸೋಮವಾರ ವಿದ್ಯಾರ್ಥಿಗಳಿಂದ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ತಮ್ಮ ಟ್ರೋಫಿಗಳೊಂದಿಗೆ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಮಾಧವನ್ ಭಟ್ಟಾತಿರಿ, ಮುಖ್ಯೋಪಾಧ್ಯಾಯಿನಿ ಮಿನಿ ಟೀಚರ್, ರಕ್ಷಕ ಶಿಕ್ಷಕ ಸಂಘ, ಮಾತೃಸಮಿತಿ, ಶಾಲಾ ಸಿಬ್ಬಂದಿ ವರ್ಗ, ಅಧ್ಯಾಪಕರುಗಳಾದ ಪ್ರಸಾದ್  ಕೆ, ನಾರಾಯಣ ಆಸ್ರ, ರಾಜೇಶ್ ಅಗಲ್ಪಾಡಿ, ನಿರಂಜನ ರೈ ಪೆರಡಾಲ, ಪ್ರಭಾವತಿ ಕೆದಿಲ್ಲಾಯ ಪುಂಡೂರು, ನಟರಾಜ ಪಟ್ಟಾಜೆ, ಸಿಬ್ಬಂದಿಗಳಾದ ಗೋಪಾಲ, ನವೀನ, ಯಜ್ಞೇಶ, ಎನ್‌ಸಿಸಿ, ಎನ್‌ಎಸ್‌ಎಸ್, ಎಸ್‌ಪಿಸಿ, ರೆಡ್ ಕ್ರೋಸ್, ಲಿಟ್ಲ್ ಕೈಟ್ಸ್, ಸ್ಕೌಟ್ ಮತ್ತು ಗೈಡ್ ಘಟಕಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

You cannot copy contents of this page