ನವ ಕೇರಳ ಕ್ರಿಯಾಯೋಜನೆ ಅಂಗವಾಗಿ ಜಲ ಸಂರಕ್ಷಣೆ ತಾಂತ್ರಿಕ ಕಾರ್ಯಗಾರ
ಮಂಜೇಶ್ವರ: ನವ ಕೇರಳ ಕ್ರಿಯಾ ಯೋಜನೆಯ ಜಲ ಬಜೆಟ್, ಸಂಯೋಜಿತ ಜಲ ಸಂರಕ್ಷಣೆ ತಾಂತ್ರಿಕ ಕಾರ್ಯಗಾರ ಮಂಜೇಶ್ವರ ಬ್ಲೋಕ್ ಪಂಚಾಯತ್ ಹಾಲ್ ನಲ್ಲಿ ನಡೆ ಯಿತು. ಜಲ ಸಂರಕ್ಷಣೆ ವಲಯದಲ್ಲಿ ವಿವಿಧ ಇಲಾಖೆಗಳ ಚಟುವಟಿಕೆಗಳು ಹಾಗೂ ಏಕೋಪನ ಸಾಧ್ಯತೆಗಳನ್ನು ಪರಿಶೀಲಿಸಿ ಬರಗಾಲವನ್ನು ಎದುರಿ ಸಲು ಸಿದ್ಧತೆಗಳು ತಯಾರಿಯಾಗಿದೆ. ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಪಿ.ಕೆ ಉದ್ಘಾಟಿಸಿದರು. ಅರ್ಜುನನ್ ಇ.ಕೆ ಅಧ್ಯಕ್ಷತೆ ವಹಿಸಿದ್ದರು. ಸಂಜೀವ್ ಪಿ.ಟಿ, ಕಲಾಮುದ್ದೀನ್ ಜಲ ಸಂರಕ್ಷಣೆ ಚಟುವಟಿಕೆಗಳ ಸಾಧ್ಯತೆಗಳ ಕುರಿತು ತರಗತಿ ನೀಡಿದರು. ಪಂಚಾಯತ್ ಅಧ್ಯಕ್ಷೆಯಾರಾದ ಭಾರತಿ.ಎಸ್, ಸುಂದರಿ ಆರ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷರಾದ ಯೂಸುಫ್ ಹೇರೂರು, ಪುಷ್ಪಲಕ್ಷ್ಮಿ ಶುಭಾಶಂ ಸನೆಗೈದರು. ನವ ಕೇರಳ ರಿಸೋರ್ಸ್ ಪರ್ಸನ್ ವಿನಯ್ ಕುಮಾರ್ ಜಲ ಬಜೆಟ್ ಕುರಿತು ವಿವರಿಸಿದರು. ನಾರಾಯಣ ನಾಯ್ಕ್ ಸ್ವಾಗತಿಸಿ, ಸೈನುದ್ದೀನ್ ಧನ್ಯವಾದ ವಂದಿಸಿದರು. ನವಂಬರ್ 01ರಂದು ಜಲಾಶಯ ಶುಚೀಕರಣ ನಡೆಸಲಾಗುವುದು.