ನವ ಕೇರಳ ಸಭೆ ಪ್ರಚಾರಾರ್ಥ ಬೀದಿ ಬದಿ ಚಿತ್ರ ರಚನೆ

ಉಪ್ಪಳ: ನವಕೇರಳ ಸಭೆ ಕಾರ್ಯ ಕ್ರಮದ ಪ್ರಚಾರಾರ್ಥ ಬೀದಿ ಬದಿ ಚಿತ್ರರಚನೆ ಕಾರ್ಯಕ್ರಮ ನಿನ್ನೆ ಸಂಜೆ ಪೈವಳಿಕೆ ನಗರದಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸಿದರು. ಆರ್.ಡಿ.ಒ ಅಥುಲ್ ಸ್ವಾಮಿನಾಥನ್, ತಹಶೀಲ್ದಾರರಾದ ಸಜೀತಿ, ಮೋಹನ್ ರಾಜ್, ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಜನಪ್ರತಿನಿಗಳಾದ ಅಬ್ದುಲ್ಲ, ಶ್ರೀನಿವಾಸ ಭಂಡಾರಿ, ಪೈವಳಿಕೆ ನಗರ ಶಾಲೆಯ ಮುಖ್ಯೋಪಧ್ಯಾಯ ಇಬ್ರಾಹಿಂ, ಪ್ರಾಂಶುಪಾಲ ರಘುರಾಮ ಆಳ್ವ ಉಪಸ್ಥಿತರಿದ್ದರು. ಶ್ಯಾಮ್ ಭಟ್ ಸ್ವಾಗತಿಸಿ, ಹಾರೀಸ್ ವಂದಿಸಿದರು. ಶಶಿ ಶ್ಯಾಮ ಕಾಂಞAಗಾಡ್, ಪ್ರಕಾಶ್ ಕುಂಬಳೆ, ಜಯಪ್ರಕಾಶ್ ನೀರ್ಚಾಲ್ ಹಾಗೂ ಕಲೋತ್ಸವದಲ್ಲಿ ಮಿಂಚಿದ ಪ್ರತಿಭೆಗಳು ಭಾಗವಹಿಸಿ ವಿವಿಧ ಚಿತ್ರಗಳನ್ನು ರಚಿಸಿದರು.

RELATED NEWS

You cannot copy contents of this page