ನಾಡಿನಾದ್ಯಂತ ಇಂದು ಮಹಾ ಶಿವರಾತ್ರಿ ಆಚರಣೆ
ಕಾಸರಗೋಡು: ಮಹಾ ಶಿವರಾತ್ರಿ ಹಬ್ಬವನ್ನು ನಾಡಿನಾದ್ಯಂತ ಇಂದು ವಿವಿಧ ಕಾರ್ಯಕ್ರಮ ಗಳೊಂದಿಗೆ ಭಕ್ತಿಪೂರ್ವಕ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮುಖ್ಯವಾಗಿ ಕಾಸg ಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ, ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರ, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ, ಪರಕ್ಕಿಲ ಶ್ರೀ ಮಹಾದೇವ ಶಾಸ್ತಾವಿನಾಯಕ ಕ್ಷೇತ್ರ, ಎಡನೀರು ಮಠ, ನಾರಂಪಾಡಿ ಶ್ರೀ ಉಮಾ ಮಹೇಶ್ವರ ಕ್ಷೇತ್ರ, ಅಡೂರು ಶ್ರೀ ಮಹತೋಬಾರ ಶ್ರೀ ಮಹಾ ಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರ, ಶಿರಿಯ ಶ್ರೀ ಶಂಕರನಾರಾಯಣ ಕ್ಷೇತ್ರ, ಪಾಡಿ ಕೈಲಾರ್ ಶಿವಕ್ಷೇತ್ರ, ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ, ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ, ಕುಂಡಂಕುಳಿ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ಸಹಿತ ನಾಡಿನ ವಿವಿಧೆಡೆಗಳಲ್ಲಿರುವ ಶಿವ ಕ್ಷೇತ್ರಗಳಲ್ಲಿ ಶಿವರಾತ್ರಿ ಆಚರಣೆ ನಡೆಯುತ್ತಿದೆ. ಇದರಂಗವಾಗಿ ಇಂದು ಮುಂ ಜಾನೆಯಿಂದಲೇ ಕ್ಷೇತ್ರಗಳಿಗೆ ಭಕ್ತರು ತೆರಳಿ ದೇವರ ದರ್ಶನ ಪಡೆಯುತ್ತಿದ್ದಾರೆ.