ನಾಪತ್ತೆಯಾಗಿದ್ದ ದಂಪತಿ ವೆಳಾಂಗಣ್ಣಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ತೃಶೂರ್: ಚಾಲಕ್ಕುಡಿ ಕೊರಟ್ಟಿಯಿಂದ ನಾಪತ್ತೆಯಾಗಿದ್ದ ದಂಪತಿ ವೆಳಾಂಗಣ್ಣಿ ಚರ್ಚ್ ಬಳಿಯ ವಸತಿ ಗೃಹದಲ್ಲಿ ವಿಷ ಚುಚ್ಚಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಿರುಮುಡಿಕುನ್ನ್ ಮೂಡಪುಳ ವರ್ಗೀಸ್ ಹಾಗೂ ಎಲ್ಸಿ ದಂಪತಿ ಪುತ್ರ ಆಂಟೋ (34) ಹಾಗೂ ಇವರ ಪತ್ನಿ ಜಿಸು (29) ಮೃತಪಟ್ಟವರು. ಕಳೆದ ತಿಂಗಳ 22ರಿಂದ ಇವರು ನಾಪತ್ತೆಯಾಗಿದ್ದರು. ವೆಳಾಂಗಣ್ಣಿಗೆ ತಲುಪಿರುವುದಾಗಿಯೂ ಅಲ್ಲಿ ಕೆಲಸದಲ್ಲಿ ನಿರತರಾಗಿರುವುದಾ ಗಿಯೂ ಊರಿಗೆ  ಮಾಹಿತಿ ಲಭಿಸಿತ್ತು. ಈ ಮಧ್ಯೆ ಮಂಗಳವಾರ ವಿಷ ಚುಚ್ಚಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಆಂಟೋರನ್ನು ನಾಗಪಟ್ಟಣ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಅವರು ಮೃತಪಟ್ಟಿದ್ದಾರೆ.

ವಿಷಯ ತಿಳಿದು ಪತ್ನಿ ಜಿಸು ಕೂಡ ವಿಷ ಚುಚ್ಚಿ ಆತ್ಮಹತ್ಯೆಗೈದಿರುವುದಾಗಿ ಮಾಹಿತಿ ಲಭಿಸಿದೆ. ವೆಸ್ಟ್ ಕೊರಟ್ಟಿ ಕಿಳುಕ್ಕನ್ ಜೋಯಿಯ ಪುತ್ರಿಯಾಗಿದ್ದಾರೆ ಜಿಸು. ಇವರಿಬ್ಬರ ಮೃತದೇಹಗಳನ್ನು ನಾಗಪಟ್ಟಣ ಮೆಡಿಕಲ್ ಕಾಲೇಜಿನಲ್ಲಿ ಮಹಜರು ನಡೆಸಿ ಊರಿಗೆ ತಲುಪಿಸಿದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

You cannot copy contents of this page