ನಾಪತ್ತೆಯಾಗಿದ್ದ ಬಾಲಕ ಪತ್ತೆ

ಕುಂಬಳೆ: ಮೊನ್ನೆ ಸಂಜೆ ಯಿಂದ ನಾಪತ್ತೆಯಾಗಿದ್ದ ಬಾಲಕ ನಿನ್ನೆ ಕುಂಬಳೆಯಲ್ಲಿ ಪತ್ತೆಯಾಗಿದ್ದಾನೆ.

ಕುಂಬಳೆ ಬಳಿಯ ಮಾವಿನ ಕಟ್ಟೆ ಪಿ.ವಿ.ಎಸ್ ಕಂಪೌಂಡ್‌ನ ನಿವಾಸಿ ಮುಹಮ್ಮದ್ ಶಾಕಿಬ್ (೧೫) ಮೊನ್ನೆ ಸಂಜೆಯಿಂದ ನಾಪತ್ತೆಯಾಗಿದ್ದನು. ಈ ಬಗ್ಗೆ ದೂರು ಲಭಿಸಿದ ಪೊಲೀಸರು ಹುಡುಕಾಡುತ್ತಿದ್ದಂತೆ ನಿನ್ನೆ ಕುಂಬಳೆಯಲ್ಲಿ ಪತ್ತೆಯಾಗಿದ್ದಾನೆ. ಈತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಮನೆ ಯವರೊಂದಿಗೆ ಕಳುಹಿಸಿ ಕೊಡಲಾಯಿತು.

Leave a Reply

Your email address will not be published. Required fields are marked *

You cannot copy content of this page