ನಾಪತ್ತೆಯಾದ ಕಾಲೇಜು ವಿದ್ಯಾರ್ಥಿಗಳು ಮುಂಬೈಯಲ್ಲಿ ಪತ್ತೆ
ಬದಿಯಡ್ಕ: ಕಾಲೇಜಿಗೆಂದು ತಿಳಿಸಿ ಮನೆಯಿಂದ ತೆರಳಿ ಬಳಿಕ ನಾಪತ್ತೆಯಾದ ಮೂವರು ಕಾಲೇಜು ವಿದ್ಯಾರ್ಥಿಗಳನ್ನು ಮುಂಬೈಯಲ್ಲಿ ಪತ್ತೆಹಚ್ಚಲಾಗಿದೆ. ಕೇರಳ ಮುಸ್ಲಿಂ ಜಮಾಅತ್ ಪದಾಧಿಕಾರಿಗಳ ಸಹಾಯದೊಂದಿಗೆ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಊರಿಗೆ ತಲುಪಿಸಲು ಪ್ರಯತ್ನ ನಡೆಯುತ್ತಿದೆ.
ಚೆಡೇಕಲ್, ಆಸಾದ್ ನಗರ, ಬದಿಯಡ್ಕ ನಿವಾಸಿಗಳಾದ ಮೂವರನ್ನು ಮೊನ್ನೆ ಮುಂಬೈಯ ಡೋಂಗ್ರಿಯಲ್ಲಿರುವ ಹೋಟೆಲೊಂ ದರ ಸಮೀಪದಿಂದ ಪತ್ತೆಹಚ್ಚಲಾಗಿ ದೆ. ಈ ಮೂವರು ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಐದು ದಿನಗಳ ಹಿಂದೆ ಕಾಲೇಜಿಗೆಂದು ತಿಳಿಸಿ ಹೋದ ಇವರು ಮರಳಿ ಮನೆಗಳಿಗೆ ತಲುಪಿರಲಿಲ್ಲ. ಮನೆಯವರು ನಡೆಸಿದ ತನಿಖೆ ವೇಳೆ ಇವರ ಬೈಕ್ಗಳು ಮಂಗಳೂರು ರೈಲ್ವೇ ನಿಲ್ದಾಣ ಪರಿಸರದಲ್ಲಿ ನಿಲುಗಡೆಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಳಿಕ ನಡೆಸಿದ ಶೋಧ ವೇಳೆ ಮೂರು ಮಂದಿ ಮುಂಬೈಗೆ ಹೋಗಿರುವುದಾಗಿ ಸಂಶಯ ಹುಟ್ಟಿಕೊಂಡಿತ್ತು. ಇದರಂತೆ ಬದಿಯಡ್ಕದ ಸಾಮಾಜಿಕ ಕಾರ್ಯಕ ರ್ತರು ಮುಂಬೈಯ ಮುಸ್ಲಿಂ ಜಮಾಅತ್ ಪದಾಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಅವರು ನಡೆಸಿದ ಶೋಧ ವೇಳೆ ವಿದ್ಯಾರ್ಥಿಗಳನ್ನು ಡೋಂಗ್ರಿಯಿಂದ ಪತ್ತೆಹಚ್ಚಲಾಗಿದೆ. ಈ ವಿದ್ಯಾರ್ಥಿಗಳು ಯಾಕಾಗಿ ಮುಂಬೈಗೆ ತೆರಳಿದ್ದಾರೆಂದು ತಿಳಿದು ಬಂದಿಲ್ಲ.