ನಾರಂಪಾಡಿ ಕ್ಷೇತ್ರ ಅಭಿವೃದ್ಧಿಗೆ ಧರ್ಮಸ್ಥಳದಿಂದ 2 ಲಕ್ಷ ರೂ. ಕೊಡುಗೆ
ನಾರಂಪಾಡಿ: ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದಿ ಯಡ್ಕ ವಲಯದ ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಭಿ ವೃದ್ಧಿಗೆ ಧರ್ಮಸ್ಥಳದಿಂದ ಕೊಡುಗೆಯಾಗಿ ನೀಡಿದ ೨ ಲಕ್ಷ ರೂ. ಮೊತ್ತದ ಡಿಡಿಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಕ್ಷೇತ್ರ ಸಮಿತಿಯವರಿಗೆ ಹಸ್ತಾಂತರಿಸಿದರು. ಈ ವೇಳೆ ಜನಜಾಗೃತಿ ವೇದಿಕೆ ಕಾರಡ್ಕ ವಲಯ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಬದಿಯಡ್ಕ ವಲಯ ಮೇಲ್ವಿಚಾರಕ ಗೋಪಾಲಕೃಷ್ಣ, ಸದಸ್ಯರಾದ ಹರೀಶ್ ಗೋಸಾಡ, ಜಯರಾಮ ಪಾಟಾಳಿ, ಸುಧಾಕರ, ಸುಬ್ರಹ್ಮಣ್ಯ ಭಟ್ ತಲೇಕ, ಸೀತಾರಾಮ, ಹರಿನಾರಾಯಣ ಶಿರಂತಡ್ಕ, ಸಂತೋಷ್ ಕುಮಾರ್, ಗೋಪಾಲಕೃಷ್ಣ, ಬಾಲಕೃಷ್ಣ ಮಾಸ್ತರ್, ಉದಯ ನಾರಂಪಾಡಿ, ಸತ್ಯನಾರಾಯಣ ಭಟ್, ದಯಾನಂದ, ದೇವರಾಜ್, ರಮೇಶ್ ಕೃಷ್ಣ, ಸತೀಶ್‌ರಾಜ್, ಕಮಲಾಕ್ಷಿ ಉಪಸ್ಥಿತರಿದ್ದರು.