ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಫೆ.2ರಿಂದ
ನಾರಂಪಾಡಿ: ನೆಕ್ರಾಜೆ ಗ್ರಾಮದ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಫೆ.2ರಿಂದ 10ರವರೆಗೂ, 11ರಿಂದ 16ರ ತನಕ ವಾರ್ಷಿಕ ಮಹೋತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬ್ರಹ್ಮಕಲಶಾಭಿಷೇಕ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪುರಾತನ ಹಾಗೂ ಪ್ರಸಿದ್ಧವಾದ ನಾಲ್ಕು ಉಪದೇವಾಲಯಗಳಲ್ಲಿ ನಾರಂಪಾಡಿ ಕ್ಷೇತ್ರವು ಒಂದಾಗಿದೆ. ಇಲ್ಲಿ ಮಹೇಶ್ವರ, ಉಮ, ಉಪದೇವರು ಗಳಾದ ಗಣಪತಿ, ದಕ್ಷಿಣಾಮೂರ್ತಿ, ನಾಗ, ದೈವಗಳಾದ ಪೂಮಾಣಿ ಕಿನ್ನಿ ಮಾಣಿ, ಗುಳಿಗ, ಧೂಮಾವತಿ ಪರಿವಾರ ದೈವಗಳ ಸಾನ್ನಿಧ್ಯವಿದೆ. ನೈರುತ್ಯ ದಿಕ್ಕಿನಲ್ಲಿ ಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯ ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನೊಂದೆಡೆ ವನಶಾಸ್ತಾರ ಗುಡಿ ಹಾಗೂ ದೈವಗಳ ಕಟ್ಟೆಗಳನ್ನು ನಿರ್ಮಿಸಿ ಆರಾಧಿಸಲಾಗುತ್ತಿದೆ. ಬ್ರಹ್ಮಕಲಶೋ ತ್ಸವದ ಯಶಸ್ವಿಗಾಗಿ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಿ ಸಿದ್ಧತೆ ಆರಂಭಗೊಂಡಿದೆ ಎಂದು ಪದಾಧಿಕಾರಿ ಗಳು ತಿಳಿಸಿದ್ದಾರೆ. ಸುದ್ಧಿಗೋಷ್ಠಿಯಲ್ಲಿ ಬ್ರಹ್ಮಕಲಶಾಭಿಷೇಕ ಪ್ರಧಾನ ಕಾರ್ಯ ದರ್ಶಿ ಬಾಲಕೃಷ್ಣ ಮಾಸ್ಟರ್ ನಾರಂಪಾಡಿ, ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಸುಬ್ರ ಹ್ಮಣ್ಯ ಭಟ್ ತಲೇಕ, ಬ್ರಹ್ಮಕಲಶಾ ಭಿಷೇಕ ಸಮಿತಿ ಕೋಶಾಧಿಕಾರಿ ಸೀತಾರಾಮ ಕುಂಜತ್ತಾಯ, ಪ್ರಚಾರ ಸಮಿತಿ ಅಧ್ಯಕ್ಷ ಕೆ. ಗಂಗಾಧರ್, ಸಂಚಾಲಕ ಪ್ರಮೋದ್ ಬಿ.ಎಸ್. ಉಪಸ್ಥಿತರಿದ್ದರು.