ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕಕ್ಕೆ ಅದ್ದೂರಿಯ ಚಾಲನೆ
ನಾರಂಪಾಡಿ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕಕ್ಕೆ ನಿನ್ನೆ ಅದ್ಧೂರಿಯ ಚಾಲನೆ ನೀಡಲÁಯಿತು. ಬೆಳಗ್ಗೆ ಗಣಪತಿ ಹೋಮ, ಉಗ್ರಾಣ ಮುಹೂರ್ತ ನಡೆಯಿತು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟï ಆನೆಮಜಲು ದೀಪಬೆಳಗಿಸಿದರು.
ಮವ್ವಾರು ಶ್ರೀಕೃಷ್ಣ ಭಜನಾ ಮಂದಿರದಿAದ ಆರಂಭಗೊAಡ ಹಸಿರುವಾಣಿ ಹೊರೆಕಾಣಿಕೆ ಮೆರ ವಣಿಗೆಯೊಂದಿಗೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ಕುರುಮುಜ್ಜಿಕಟ್ಟೆ, ವಲವಡಲ ಶ್ರೀ ಮಹಾದೇವ ಶ್ರೀ ಮಹಾವಿಷ್ಣು ದೇವಸ್ಥಾನ ಪಣಿಯೆ, ಅಂಕುರ್ ಎಂಟರ್‌ಪ್ರೆöÊಸಸ್ ಬದಿಯಡ್ಕ ಹಾಗೂ ಭಗವದ್ಭಕ್ತರು ತಮ್ಮ ಭಕ್ತಿಯ ಕಾಣಿಕೆಯೊಂದಿಗೆ ಜೊತೆಗೂಡಿ ದರು. ಮಕ್ಕಳ ಕುಣಿತ ಭಜನೆ, ಮುತ್ತು ಕೊಡೆಗಳೊಂದಿಗೆ ಮಾತೆ ಯರು, ಚೆಂಡೆ, ವಾದ್ಯಮೇಳಗಳು ಮೆರವಣಿಗೆಗೆ ಶೋಭೆಯನ್ನು ತಂದಿತು. ಬ್ರಹ್ಮಕಲ ಶೋತ್ಸವ ಸಮಿತಿಯ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ, ಪವಿತ್ರಪಾಣಿ ಕಿರಣ್ ಕುಮಾರ್ ಕುಣಿಕುಳ್ಳಾಯ ಉಬ್ರಂಗಳ, ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಹರಿನಾರಾಯಣ ಶಿರಂತಡ್ಕ, ಸುಬ್ರಹ್ಮಣ್ಯ ಭಟ್ ತಲೇಕ, ಐತ್ತಪ್ಪ ಮವ್ವಾರು, ಬಾಲಕೃಷ್ಣ ಮಾಸ್ತರ್ ನಾರಂಪಾಡಿ, ಹರೀಶ್ ಗೋಸಾಡ, ಗೋಪಾಲಕೃಷ್ಣ ಮುಂಡೋಳುಮೂಲೆ, ರವೀಂದ್ರ ರೈ ಗೋಸಾಡ, ನಳಿನಿ ಕೃಷ್ಣ, ರಮೇಶ್ ಶರ್ಮ ಕುರುಮುಜ್ಜಿಕಟ್ಟೆ, ಡಾ| ಶ್ರೀನಿದಿs ಸರಳಾಯ, ಗಂಗಾಧರ ರೈ ಮಠದಮೂಲೆ ನೇತೃತ್ವ ನೀಡಿದ್ದರು. ಸಂಜೆ ದೇಲಂಪಾಡಿ ಗಣೇಶ ತಂತ್ರಿಯವgಗೆ ಪೂರ್ಣಕುಂಭ ಸ್ವಾಗತ ನೀಡಲÁಯಿತು.
ಉಮಾಮಹೇಶ್ವರ ಸಾಂಸ್ಕೃತಿಕ ವೇದಿಕೆಯನ್ನು ಬ್ರಹ್ಮಕಲಶಾಭಿಷೇಕ ಸಮಿತಿಯ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ದೀಪಬೆಳಗಿಸಿ ಉದ್ಘಾಟಿಸಿ ದರು. ವಿದುಷಿ ವಾಣೀಪ್ರಸಾದ್ ಕಬೆಕ್ಕೋಡು ಸುನಾದ ಸಂಗೀತ ಕಲಾಶಾಲೆ ಬದಿಯಡ್ಕ ಇವರ ವಿದ್ಯಾರ್ಥಿಗಳಿಂದ ಶಾಸ್ತಿçÃಯ ಸಂಗೀತ, ವಿಶ್ವನಾಥ ರೈ ಮಾನ್ಯ ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ರಾತ್ರಿ ಸುಮೇಧಾ ಮತ್ತು ಧರಣಿ ಸರಳಿ ಇವರಿಂದ ಶಾಸ್ತಿçÃಯ ಸಂಗೀತ ನಡೆಯಿತು. ಇಂದು ಪ್ರಾತಃಕಾಲ ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮಗಳು, ಪ್ರೋಕ್ತ ಹೋಮ, ಚತುಃಶುದ್ಧಿ, ಧಾರಾ, ಅವಗಾಹ, ಪಂಚಕ, ಅಂಕುರ ಪೂಜೆ ನಡೆಯಿತು. ಸಂಜೆ ೬ ಗಂಟೆಗೆ ಹೋಮಕಲಶಾಭಿಷೇಕ, ಅಂಕುರ ಪೂಜೆ ಮಹಾಪೂಜೆ ನಡೆಯಲಿದೆ. ಬೆಳಗ್ಗೆ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆಗಮನ, ಧಾರ್ಮಿಕ ಸಭಾವೇದಿಕೆಯ ಉದ್ಘಾಟನೆ ನಡೆಯಿತು.