ನಾರಾಯಣಮಂಗಲ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ನಡಾವಳಿ ಮಹೋತ್ಸವ ನಾಳೆಯಿಂದ
ಕುಂಬಳೆ: ನಾರಾಯಣಮಂಗಲ ಶ್ರೀ ಚೀರುಂಬಾ ಭಗವತಿ ಕ್ಷೇತ್ರದಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ನಡಾವಳಿ ಮಹೋತ್ಸವ ನಾಳೆಯಿಂದ ಮಾರ್ಚ್ 2ರವರೆಗೆ ಜರಗಲಿದೆ. ನಾಳೆ ಬೆಳಿಗ್ಗೆ 7.30ಕ್ಕೆ ತಂತ್ರಿವರ್ಯ ಬ್ರಹ್ಮಶ್ರೀ ಉಳಾಲುಬೂಡು ಪ್ರಕಾಶ ಕಡಮಣ್ಣಾ ಯರಿಗೆ ಪೂರ್ಣಕುಂಭ ಸ್ವಾಗತ, ೮ಕ್ಕೆ ಸಾಮೂಹಿಕ ಪ್ರಾರ್ಥನೆ, 12 ತೆಂಗಿನಕಾಯಿ ಗಣಪತಿ ಹೋಮ, ನವಕಾಭಿಷೇಕ, ದೈವಗಳಿಗೆ ತಂಬಿಲ, 10ಕ್ಕೆ ಉಗ್ರಾಣ ಮುಹೂರ್ತ, ಭಜನೆ, ಅಪರಾಹ್ನ ಗಂಟೆ 2ರಿಂದ ಹರಿಕಥಾ ಸತ್ಸಂಗ ನಡೆಯಲಿದೆ. ಸಂಜೆ ೫ಕ್ಕೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಟು ರಾತ್ರಿ 8.30ಕ್ಕೆ ಕ್ಷೇತ್ರಕ್ಕೆ ತಲುಪಲಿದೆ.
ರಾತ್ರಿ 8.30ರಿಂದ ತುಳುವೆರೆ ಉಡಲ್ ಜೋಡುಕಲ್ಲು ಇವರಿಂದ ತುಳು ನಾಟಕ ‘ತನಿಯಜ್ಜೆ’ ಪ್ರದರ್ಶನಗೊಳ್ಳಲಿದೆ. ನಾಳೆಯಿಂದ ಮಾರ್ಚ್ 2ರವರೆಗೆ ಪ್ರತೀ ದಿನ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಧ್ಯಾಹ್ನ, ರಾತ್ರಿ ಅನ್ನ ಸಂತರ್ಪಣೆ ನಡೆಯಲಿರುವುದೆಂದು ಕ್ಷೇತ್ರದಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ. ಉತ್ಸವಸಮಿತಿ ಪ್ರಧಾನ ಸಂಚಾಲಕ ರವಿ ನಾಯ್ಕಾಪು ಮೊದಲಾದವರು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.