ನಾಲ್ಕು ವಿಭಾಗಗಳ  ಕಲ್ಯಾಣ ಪಿಂಚಣಿ ಹೆಚ್ಚಳ

ಕಾಸರಗೋಡು: ರಾಜ್ಯದಲ್ಲಿ ನಾಲ್ಕು ವಿಭಾಗಗಳ ಕಲ್ಯಾಣ ಪಿಂಚಣಿಗಳನ್ನು ೧೬೦೦ರೂ.ನಂತೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್ ತಿಳಿಸಿದ್ದಾರೆ.

ಇದರಂತೆ ವಿಶ್ವಕರ್ಮ, ಸರ್ಕಸ್, ಅನಾರೋಗ್ಯ ಸ್ಥಿತಿಯಲ್ಲಿರುವ ಕ್ರೀಡೆ ಮತ್ತು ಕಲಾಗಾರರಿಗೆ ನೀಡಲಾಗುವ ಕಲ್ಯಾಣ ಪಿಂಚಣಿ ೧೬೦೦ ರೂ.ನಂತೆ ಹೆಚ್ಚಿಸಲಾಗಿದೆ. ಈ ನಾಲ್ಕು ವಿಭಾಗಗಳಲ್ಲಿ ಅನಾರೋಗ್ಯ ಸ್ಥಿತಿಯಲ್ಲಿರುವ ಕಲಾಗಾರರಿಗೆ ಈಗ ೧೦೦೦ ರೂ.ನಂತೆ ಕಲ್ಯಾಣ ಪಿಂಚಣಿ ಲಭಿಸುತ್ತದೆ. ಅನಾರೋಗ್ಯಪೀಡಿತ ಕ್ರೀಡಾ ಪಟುಗಳಿಗೆ ತಲಾ ೧೩೦೦ ರೂ.ನಂತೆಯೂ, ಸರ್ಕಸ್ ಕಲಾವಿಧರಿಗೆ ತಲಾ ೧೨೦೦ ರೂ. ಹಾಗೂ ವಿಶ್ವಕರ್ಮ ಪಿಂಚಣಿಯಾಗಿ ತಲಾ ೧೪೦೦ ರೂ.ನಂತೆ ಈಗ ಲಭಿಸುತ್ತಿದೆ. ಅದು ಇನ್ನು ೧೬೦೦ ರೂ.ಗೇರಲಿದೆ ಎಂದು ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page