ನಿರ್ಮಾಣ ಕೆಲಸದ ವೇಳೆ ಗೋಡೆ ಕುಸಿದು ಬಿದ್ದು ಕಾರ್ಮಿಕರಿಬ್ಬರು ದಾರುಣ ಮೃತ್ಯು

ಕಾಸರಗೋಡು: ನಿರ್ಮಾಣ ಕೆಲಸದ ವೇಳೆ ಗೋಡೆ ಕುಸಿದು ಬಿದ್ದು ಕರ್ನಾಟಕದ ವಲಸೆ ಕಾರ್ಮಿಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ಮೀನು ಮಾರುಕಟ್ಟೆ ಬಳಿ ನಡೆದಿದೆ.

ಕರ್ನಾಟಕ ವಿಜಯನಗರ ಬೊಮ್ಮನಹಳ್ಳಿ ಅರಗಿಯ ಮುರುಗೇರಿ ನಿವಾಸಿ ಬಿ.ಎಂ. ಕೊಟ್ರಯ್ಯ -ರತ್ನಮ್ಮ ದಂಪತಿ ಪುತ್ರ ಬಿ.ಎಂ. ಬಸಯ್ಯ (೩೯) ಮತ್ತು ಕೊಪ್ಪಳ ಕೋಕ್ಕನ್ನೂರು ತಾಲೂಕು ನಿಂಗಾಪುರ ನಿವಾಸಿ ರಾಮಪ್ಪ – ಸತ್ಯಮ್ಮ ದಂಪತಿ ಪುತ್ರ ಲಕ್ಷಪ್ಪ (೫೦) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ನಗರದ ಹಳೆ ಬಸ್ ನಿಲ್ದಾಣ ಬಳಿಯ ಮೀನು ಮಾರುಕಟ್ಟೆಯ ಫಿರ್ದೋಸ್ ರಸ್ತೆಯಲ್ಲಿ ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ. ಕಟ್ಟಡ ವೊಂದಕ್ಕೆ ಮಲೀನ ಜಲ ಕೊಳವೆ ಅಳವಡಿಸುವ ಕೆಲಸದಲ್ಲಿ ಈ ಇಬ್ಬರು ಕಾರ್ಮಿಕರು ನಿರತರಾಗಿದ್ದರು. ಆಗ ಅಡಿಭಾಗದಿಂದ ಮಣ್ಣು ಅಗೆದು ತೆಗೆಯುತ್ತಿದ್ದ ವೇಳೆ ಅಲ್ಲೇ ತಾಗಿ ನಿಂತಿದ್ದ ಸುಮಾರು ೧೫ ಮೀಟರ್ ಉದ್ದದ ಕಲ್ಲಿನ ಗೋಡೆ  ದಿಢೀರ್ ಕುಸಿದು ಈ ಇಬ್ಬರು ಕಾರ್ಮಿಕರ ಮೇಲೆ ಬಿದ್ದಿದೆ. ವಿಷಯ ತಿಳಿದ ಕಾಸಗೋಡು ಅಗ್ನಿಶಾಮಕದಳ ತಕ್ಷಣ ಆಗಮಿಸಿ ಗೋಡೆಯ ಅಡಿ ಭಾಗದಲ್ಲಿ ಸಿಲುಕಿದ್ದ ಕಾರ್ಮಿಕರಿಬ್ಬರನ್ನು ಹೊರತೆಗೆದು ಜನರಲ್ ಸ್ಪತ್ರೆಗೆ ಸಾಗಿಸಿ ತುರ್ತು  ಚಿಕಿತ್ಸೆ ಕೊಡಿಸಿದರೂ ಆ ಇಬ್ಬರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ರಕ್ಷಾ ಕಾರ್ಯಾಚರಣೆಯಲ್ಲಿ ಊರವರು ಮತ್ತು ಪೊಲೀಸರೂ ಸಹಕರಿಸಿದರು.

ಮೃತ ಕಾರ್ಮಿಕರಿಬ್ಬರು ನಗರದ ನುಳ್ಳಿಪ್ಪಾಡಿಯ ಕ್ವಾರ್ಟರ್ಸ್‌ವೊಂ ದರಲ್ಲಿ ವಾಸಿಸಿ ಕೂಲಿ ಕೆಲಸಕ್ಕಾಗಿ ಹೋಗುತ್ತಿದ್ದರು. ನಿನ್ನೆ ಇವರು ಬೆಳಿಗ್ಗೆ ನಗರದ ಹಳೇ ಬಸ್ ನಿಲ್ದಾಣ ಪರಿಸರದಲ್ಲಿ ಕೆಲಸ ಅರಸಿಕೊಂಡು ನಿಂತಿದ್ದ ವೇಳೆ ತಾನು ಅವರನ್ನು ಕೊಳವೆ ಅಳವಡಿಸುವ ಕೆಲಸಕ್ಕಾಗಿ ಮೀನು ಮಾರುಕಟ್ಟೆ ಬಳಿ ಕರೆದೊ ಯ್ದಿದ್ದೆನೆಂದು ಅದರ ನಿರ್ಮಾಣ ಗುತ್ತಿಗೆದಾರರು ತಿಳಿಸಿದ್ದಾರೆ. ಈ ಸಾವಿನ ಬಗ್ಗೆ ಮೃತರ ಊರಲ್ಲಿರುವ ಕುಟುಂಬದವರಿಗೆ ಪೊಲೀಸರು ಮಾಹಿತಿ ನೀಡಿದ್ದು, ಅದರಂತೆ ಕುಟುಂಬ ಸದಸ್ಯರು ಇಂದು ಕಾಸರಗೋಡಿಗೆ ಆಗಮಿಸಿದ್ದಾರೆ. ಮೃತದೇಹಗಳನ್ನು ಇಂದು ಬೆಳಿಗ್ಗೆ ಜನರಲ್ ಆಸ್ಪತ್ರೆಯಲ್ಲಿ ಮರ ಣೋತ್ತರ ಪರೀಕ್ಷೆಗೊಳಪಡಿಸಲಾ ಯಿತು. ಕಾಸರಗೋಡು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರು. ಮೃತ ದೇಹಗಳನ್ನು ಊರಿಗೆ ತಲುಪಿಸುವ ಪ್ರಯತ್ನವೂ ನಡೆಯುತ್ತಿದೆ.

ಮೃತ ಲಕ್ಷಪ್ಪ ಪತ್ನಿ ರೇಣುಕಮ್ಮ, ಮಕ್ಕಳಾದ ಸತ್ಯಮ್ಮ, ಸಂಗೀತ, ಅಭಿ, ಸಹೋದರ ಹನುಮಂತಪ್ಪ, ಸಹೋದರಿ ಅವ್ವಮ್ಮ ಎಂಬವರನ್ನು ಅಗಲಿದ್ದಾರೆ.

ಮೃತ ಬಸಯ್ಯ ಹೆತ್ತವರ ಹೊರತಾಗಿ ಪತ್ನಿ ರೇಖಾ, ಮಕ್ಕ ಳಾದ ವಿನಯ, ರೂಪ, ಮಾಯ, ಸಹೋದರ ಶಣ್ಮುಗಯ್ಯ, ಸಹೋದರಿ ಭಾಗ್ಯಮ್ಮ ಎಂಬವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page