ನಿಲ್ಲಿಸಿದ್ದ ಆಟೋ ರಿಕ್ಷಾ ಬೆಂಕಿಗಾಹುತಿ

ಕುಂಬಳೆ: ನಿಲ್ಲಿಸಿದ್ದ ಆಟೋ ರಿಕ್ಷಾವೊಂದು ಉರಿದು ನಾಶಗೊಂಡ ಘಟನೆ ನಡೆದಿದೆ. ಬಾಯಾರು ಬಳ್ಳೂರು ನಿವಾಸಿ ರವಿ ಕುಮಾರ್ ಎಂಬವರ ಆಟೋ ರಿಕ್ಷಾ ಬೆಂಕಿಗಾಹುತಿಯಾಗಿದೆ. ನಿನ್ನೆ ರೋಗಿಯೊಬ್ಬರನ್ನು ರಿಕ್ಷಾದಲ್ಲಿ ಕುಂಬಳೆಯ ಆಸ್ಪತ್ರೆಗೆ ತಲುಪಿಸಲಾಗಿದೆ. ಬಳಿಕ ರಿಕ್ಷಾವನ್ನು ಬದಿಯಡ್ಕ ರಸ್ತೆಯಲ್ಲಿರುವ ಪೆಟ್ರೋಲ್  ಬಂಕ್ ಸಮೀಪ ಸ್ಟಿಕ್ಕರ್  ಅಂಟಿಸುವ ಅಂಗಡಿ ಮುಂದೆ ನಿಲ್ಲಿಸಲಾಗಿತ್ತು. ರವಿ ಕುಮಾರ್ ಅಲ್ಪ ದೂರದಲ್ಲಿ ನಿಂತು ವ್ಯಕ್ತಿಯೊಬ್ಬರನ್ನು ಮಾತನಾಡಿಸುತ್ತಿದ್ದರಂತೆ ರಿಕ್ಷಾ ಉರಿಯುತ್ತಿರುವುದು ಕಂಡುಬಂದಿದೆ. ಕೂಡಲೇ ಅವರು ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದರೂ ಆದರೆ ಅಷ್ಟರೊಳಗೆ ಅದ ಪೂರ್ಣವಾಗಿ ಉರಿದು ನಾಶಗೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ತಗಲಿದೆಯೆಂದು ಹೇಳಲಾಗುತ್ತಿದೆ.

You cannot copy contents of this page