ಏಳ್ಕಾನದಿಂದ ರಬ್ಬರ್ ಶೀಟ್ ಯಂತ್ರ ಕಳವು: ಓರ್ವ ಆರೋಪಿ ಪೊಲೀಸ್ ಕಸ್ಟಡಿಯಲ್ಲಿ

ಬದಿಯಡ್ಕ: ಶೇಣಿ ಏಳ್ಕಾನ ದಿಂದ ರಬ್ಬರ್ ಶೀಟ್ ಯಂತ್ರ ಕಳವಿಗೀ ಡಾದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬದಿಯಡ್ಕ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿ ದ್ದಾರೆ. ಅರಿಯಪ್ಪಾಡಿ ಕೋಟ ನಿವಾಸಿಯಾದ ೧೯ರ ಹರೆಯದ ಯುವಕ  ಕಸ್ಟಡಿಯಲ್ಲಿದ್ದು ಈತನನ್ನು ಸಮಗ್ರ ತನಿಖೆ ಗೊಳಪಡಿಸ ಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪ್ರಾಯ ಪೂ ರ್ತಿಯಾಗದ ಮತ್ತಿಬ್ಬರ ಸಹಾಯದಿಂದ ಈತ 600 ಕಿಲೋ ತೂಕವುಳ್ಳ ರಬ್ಬರ್ ರೋಲರ್  ಕಳವುಗೈದಿರು ವುದಾಗಿ ಸಂಶಯಿಸ ಲಾಗುತ್ತಿದೆ. ಈಬಗ್ಗೆ ಕನ್ನಾಟಿಕಾನದ ಸೋಜನ್ ಜೋರ್ಜ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜೂನ್ ೨೨ ರಿಂದ ೨೮ರ ಮಧ್ಯೆ ಗಿನ ದಿನಗಳಲ್ಲಿ ಪಿ.ವಿ. ರಬ್ಬರ್ಸ್ ಎಂಬ ವ್ಯಾಪಾರ ಸಂಸ್ಥೆಯಿಂದ ಯಂತ್ರವನ್ನು ಕಳವು ನಡೆಸಲಾಗಿದೆ.

You cannot copy contents of this page