ವಿದ್ಯುತ್ ನಿಯಂತ್ರಣ ಮುಂದುವರಿಯಲಿದೆ-ಸಚಿವ ಸನ್ನಿ ಜೋಸೆಫ್

ತಿರುವನಂತಪುರ: ರಾಜ್ಯದಲ್ಲಿ  ವಿದ್ಯುತ್  ಉಪಯೋಗ ತಾರಕ್ಕೇರತೊಡಗಿದ್ದು ಇದರಿಂದಾಗಿ  ಹೇರಲಾಗಿರುವ ವಿದ್ಯುತ್ ನಿಯಂತ್ರಣ ಇನ್ನು ಎಷ್ಟು ದಿನಗಳ ತನಕ ಮುಂದುವರಿಯಲಿದೆಯೆಂಬ ಬಗ್ಗೆ ಸದ್ಯ ಏನೂ ಹೇಳುವಂತಿಲ್ಲ ವೆಂದು ವಿದ್ಯುತ್ ಖಾತೆ ಸಚಿವ ಸನ್ನಿ ಜೋಸೆಫ್  ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಮುಂಗಾರುಮಳೆ ಕೈಗೊಟ್ಟಿರುವುದೇ ವಿದ್ಯುತ್ ಉತ್ಪಾದನೆ ಕುಸಿಯಲು ಹಾಗೂ ತಾಪಮಾನ ಮಟ್ಟ ಹೆಚ್ಚಿ ವಿದ್ಯುತ್ ಉಪಯೋಗ ಏರಲು ಕಾರಣವಾಗಿದೆ.  ವಿದ್ಯುತ್ ಉಪಯೋಗವನ್ನು ಜನರು ಗರಿಷ್ಠ ಪ್ರಮಾಣದಲ್ಲಿ  ಕಡಿಮೆ ಮಾಡಲು  ಮುಂದಾಗಬೇಕೆಂದು ಇದೇ ಸಂದರ್ಭದಲ್ಲಿ ಸಚಿವರು ವಿನಂತಿಸಿದ್ದಾರೆ.

ಕೇಂದ್ರ ವ್ಯೂಹದಿಂದ ಕೇರಳಕ್ಕೆ  ಲಭಿಸುತ್ತಿರುವ ವಿದ್ಯುತ್ ಪೂರೈಕೆ ಯಲ್ಲೂ ಈಗ ಇಳಿಮುಖ ವುಂಟಾ ಗಿದೆ. ಇದನ್ನು ಒಂದು ಆಡಳಿತ ಪರಾಜಯವೆಂದು ಹೇಳುವಂತಿಲ್ಲ. ಈ ಹಿಂದಿನ ಎಡರಂಗ ಸರಕಾರದ ಆಡಳಿತಾವಧಿಯಲ್ಲೂ ಇಂತಹ ನಿಯಂತ್ರಣ ಏರ್ಪಡಿಸಲಾಗಿತ್ತು. ಬ್ಯಾಟರಿ ಸ್ಟೋರೇಜ್‌ನ್ನು ಹೆಚ್ಚಿಸುವ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಯೆಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕೇರಳ ಎದುರಿಸುತ್ತಿರುವ ವಿದ್ಯುತ್ ಕ್ಷಾಮಕ್ಕೆ ಶಾಶತ ಪರಿಹಾರ ಕಂಡುಕೊಳ್ಳಲು ಕಾಸರಗೋಡು ಜಿಲ್ಲೆಯ ಚೀಮೇನಿಯಲ್ಲಿ ಈ ಹಿಂದೆ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಸರಕಾರ ಮುಂದಾಗಿತ್ತು. ಅದರ ವಿರುದ್ಧ ಸ್ಥಳೀಯರು ತೀವ್ರ ಹೋರಾಟ ಆರಂಭಿಸಿದ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಕೈಬಿಡಬೇಕಾಗಿ ಬಂದಿತ್ತು. ಅದಾದನಂತರ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಯೋಜನೆ ಜ್ಯಾರಿಗೊಳಿಸಲು ಸರಕಾರ ಮುಂದಾ ಗಿತ್ತು.  ಅದರ ವಿರುದ್ಧವೂ ಜನಾಂ ದೋಲನ ನಡೆಯಿತು. ಇದರಿಂದ ಈ ಎರಡು ಯೋಜನೆ ಗಳನ್ನು ಸರಕಾರ  ಕೈಬಿಡಬೇಕಾಗಿ ಬಂದಿತ್ತು.  ಒಂದು ವೇಳೆ ಚೀಮೇನಿಯಲ್ಲಿ  ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲ್ಪಡುತ್ತಿದ್ದಲ್ಲಿ ರಾಜ್ಯ  ತೀವ್ರ ಕ್ಷಾಮ ಎದುರಿಸಬೇಕಾದ ಸ್ಥಿತಿ  ಇಂದು  ಉಂಟಾಗುತ್ತಿರಲಿಲ್ಲ. 

You cannot copy contents of this page