ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿಗೆ ನೂತನ ಪದಾಧಿಕಾರಿಗಳು

ಉಪ್ಪಳ: ಮಂಜೇಶ್ವರ ಮಂಡಲ ಮುಸ್ಲಿಂ ಲೀಗ್ ಪದಾಧಿಕಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಮಂಡಲ ಕೋಶಾಧಿಕಾರಿ ಸೈಫುಲ್ಲಾ ತಂಙಳ್ ಬ್ಲೋಕ್ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಮಂಡಲ ಉಪಾಧ್ಯಕ್ಷರಾಗಿದ್ದ ಅಬ್ದುಲ್ಲ ಮಾದೇರಿ ಯವರನ್ನು ನೂತನ ಕೋಶಾಧಿಕಾರಿ ಯಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮೊಯ್ದೀನ್ ಪ್ರಿಯ, ಅಬೂಬಕ್ಕರ್ ಪೆರ್ಣೆ ಎಂಬಿವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಮುಸ್ಲಿಂ ಲೀಗ್ ಉಪಾಧ್ಯಕ್ಷ ಟಿ. ಮೂಸ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಅಸೀಸ್ ಮರಿಕೆ ಅಧ್ಯಕ್ಷತೆ ವಹಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಎ.ಕೆ. ಆರೀಫ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಹಾರಿಸ್ ಚೂರಿ ಚುನಾವಣೆ ಕ್ರಮಗಳನ್ನು ನಿಯಂತ್ರಿಸಿದರು. ಆದಿ ತಂಙಳ್ ಯು.ಕೆ. ಸೈಫುಲ್ಲ ತಂಙಳ್, ಪಿ.ಎಂ. ಸಲೀಂ, ಝಡ್.ಎ. ಕಯ್ಯಾರ್, ಟಿ.ಎಂ. ಶುಹೈಬ್, ಅಬ್ದುಲ್ಲ ಮಾಳಿಗ, ಖಾಲಿದ್ ದುರ್ಗಿಪಳ್ಳ, ಅಶ್ರಫ್ ಕಾರ್ಲೆ, ಮೂಸ ಗೋಲ್ಡನ್, ಬಿ.ಎ. ರಹ್ಮಾನ್ ಆರಿಕ್ಕಾಡಿ, ಹಾರಿಸ್ ಪಾವೂರು, ಖಲೀಲ್ ಮರಿಕೆ, ಸಲೀಂ ಧರ್ಮನಗರ, ಹನೀಫ ಕುಚ್ಚಿಕ್ಕಾಡ್, ಸವಾದ್ ಅಂಗಡಿಮೊಗರು, ಸಿದ್ದಿಕ್ ದಂಡೆಗೋಳಿ, ಯೂಸುಫ್ ಹೇರೂರು, ಮೂಸ ದುಬಾಯಿ, ಮಹಮ್ಮೂದ್ ಹಾಜಿ ಮಣ್ಣಂಗುಳಿ, ಅಬ್ದುಲ್ಲ ಮಾದೇರಿ ಮಾತನಾಡಿದರು.

RELATED NEWS

You cannot copy contents of this page