ವರ್ಕಾಡಿ: ರಾಜ್ಯ ಸರಕಾರದ ರಿಸ್ಕ್ ಫಂಡ್ ಯೋಜನೆ ಪ್ರಕಾರ ಲಭಿಸಿದ 1 ಲಕ್ಷ ರೂ. ಮೊತ್ತದ ಚೆಕ್‌ನ್ನು ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನಿಂದ ಪಾವೂರು ನಿವಾಸಿ ದಿ| ದಯಾನಂದರ ಪುತ್ರ ಪ್ರಶಾಂತ್ ಡಿ. ಬಂಗೇರರಿಗೆ ಬ್ಯಾಂಕ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಸ್ತಾಂತರಿಸಿದರು. ಈ ವೇಳೆ ಬ್ಯಾಂಕ್‌ನ ಉಪಾಧ್ಯಕ್ಷ ಸತ್ಯನಾರಾಯಣ ಭಟ್, ನಿಕೋಲಸ್ ಮೊಂತೇರೊ, ಜಗದೀಶ್ ಚೆಂಡೇಲ್, ಮೂಸ ಕುಂಞಿ, ರಂಜಿತ್, ಸುಮನ್, ಕಾರ್ಯದರ್ಶಿ ಶ್ರೀವತ್ಸ ಭಟ್ ಉಪಸ್ಥಿತರಿದ್ದರು.






