ನಿಲ್ಲಿಸಿದ್ದ ಸ್ಕೂಟರ್‌ನಿಂದ ಹಾಡಹಗಲೇ ಕಳವುಗೈದ ಆರೋಪಿ ಸೆರೆ

ಕಾಸರಗೋಡು: ಅಂಗಡಿ ಮುಂಭಾಗ ನಿಲ್ಲಿಸಿದ್ದ ಸ್ಕೂಟರ್‌ನಿಂದ ೨೬,೦೦೦ ರೂ. ಕಳವುಗೈದ ವ್ಯಕ್ತಿಯನ್ನು ಸೆರೆಹಿಡಿಯಲಾಗಿದೆ. ಚೆಂಗಳ ಸಂತೋಷ್‌ನಗರ್ ನಿವಾಸಿ ಹಾಗೂ ನೆಲ್ಲಿಕಟ್ಟೆ ಶಕ್ತಿನಗರದಲ್ಲಿ ವಾಸಿಸುತ್ತಿರುವ ಬಿ.ಕೆ. ಮೊಯ್ದೀನ್ ನಿಸಾಫ್(೩೮)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಈತ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಎರಡು ವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಿನ್ನೆ ಹಾಡಹಗಲೇ ಬೋವಿಕ್ಕಾನ ಅಮ್ಮಂಗೋಡು ಗೋಳಿಯಡ್ಕ ನಿವಾಸಿ ಪುರುಷೋತ್ತಮರ ಸ್ಕೂಟರ್ ನಿಂದ ಹಣ ಕಳವುಗೈಯ್ಯಲಾಗಿತ್ತು. ಚೆರ್ಕಳ- ಜಾಲ್ಸೂರು ರಸ್ತೆಯ ೮ನೇ ಮೈಲಿನಲ್ಲಿರುವ ಸ್ವಂತ ಸಂಸ್ಥೆಯ ಮುಂಭಾಗದಲ್ಲಿ ಪುರುಷೋತ್ತಮನ್ ಸ್ಕೂಟರನ್ನು ನಿಲ್ಲಿಸಿದ್ದರು. ಬೈಕ್‌ನಲ್ಲಿ ತಲುಪಿದ ತಂಡ ಕಳವಿನ ಹಿಂದಿದೆ ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಸ್ಥಳೀಯ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳನ ಬಗ್ಗೆ ಕುರುಹು ಲಭಿಸಿದ್ದು, ಗಂಟೆಗಳೊಳಗೆ ಈತನನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page