ಕಾಸರಗೋಡು: ಸರಕಾರಿ ಫಿಶರೀ ಸ್ ಯು.ಪಿ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ, ನೆಲ್ಲಿಕುಂಜೆ ಬೀಚ್ ರಸ್ತೆ ಮಲ್ಯ ನಿವಾಸ ನಿವಾಸಿ ಪ್ರಭಾಕರ ಮಲ್ಯರ ಪತ್ನಿ ಇಂದಿರಾ ಟೀಚರ್ (72) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ಪತಿ, ಪುತ್ರಿ ರಂಜಿತಾ, ಅಳಿಯ ಹರೀಶ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.