ನಿವೃತ್ತ ಮುಖ್ಯೋಪಾಧ್ಯಾಯ ನಿಧನ
ಉಪ್ಪಳ: ಬಾಯಾರು ಕುರುವೇರಿ ನಿವಾಸಿ ನಿವೃತ್ತ ಮುಖ್ಯೋಪಾಧ್ಯಾಯ ಎಸ್. ನಾರಾಯಣ ಭಟ್ (85) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಕಲ್ಲಿಕೋಟೆಯಲ್ಲಿರುವ ಮಗನ ಮನೆಯಲ್ಲಿದ್ದರು. ಇಂದು ಮುಂಜಾನೆ ವೇಳೆ ನಿಧನ ಸಂಭವಿಸಿದೆ. ಬಾಯಾರು ಹೆದ್ದಾರಿ ಶಾಲೆಯ ನಿವೃತ್ತ ಮುಖ್ಯೋ ಪಾಧ್ಯಾಯರಾಗಿದ್ದಾರೆ. ಶಾಲಾ ಆಡಳಿತ ಮಂಡಳಿ ಗ್ರಂಥಾಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೆಎಸ್ಟಿಎ ರಾಜ್ಯ ಸಮಿತಿ ಸದಸ್ಯನೂ ಆಗಿದ್ದರು. ಇವರ ಪತ್ನಿ ಲಕ್ಷ್ಮಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಗಣೇಶ, ರೇಖಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.