ನಿವೃತ್ತ ಶಿಕ್ಷಕನನ್ನು ಹಾಡಹಗಲೇ ಕಡಿದು ಕೊಲೆ
ಪುತ್ತೂರು: ನಿವೃತ್ತ ಶಿಕ್ಷಕ ಬಾಲ ಕೃಷ್ಣ ಭಟ್ (83)ರನ್ನು ಬರ್ಬರ ವಾಗಿ ನಿನ್ನೆ ಸಂಜೆ ಕೊಲೆಮಾಡಲಾ ಗಿದೆ. ಮೃತದೇಹ ಮನೆ ಬಳಿಯ ಅಂಗಳದಲ್ಲಿ ಪತ್ತೆಯಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಪೆಳಾಲು ಗ್ರಾಮದಲ್ಲಿ ಘಟನೆ ನಡೆದಿದೆ. ತಲೆಗೆ ಕತ್ತಿಯಿಂದ ಕಡಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದ್ದು, ಮನೆಯ ಒಳಗೆ ಹಾಗೂ ಜಗಲಿಯಲ್ಲಿ ರಕ್ತ ಬಿದ್ದಿರುವುದು ಪತ್ತೆಯಾಗಿದೆ. ಇವರ ಪತ್ನಿ ಈ ಹಿಂದೆ ನಿಧನ ಹೊಂದಿದ್ದಾರೆ. ಇಬ್ಬರು ಪುತ್ರರಲ್ಲಿ ಓರ್ವ ಹರೀಶ್ ಬೆಂಗಳೂರಿನಲ್ಲಿದ್ದು, ಇನ್ನೋರ್ವ ಪುತ್ರ ಸುರೇಶ್ ಕೆಲಸವಿಲ್ಲದೆ ಮನೆಯಲ್ಲಿ ಇದ್ದನೆನ್ನಲಾಗಿದೆ.
ನಿನ್ನೆ ಸಂಜೆ ಬಾಲಕೃಷ್ಣ ಭಟ್ರ ಮೃತದೇಹ ಪತ್ತೆಯಾಗಿದ್ದು, ಈ ವೇಳೆ ಪುತ್ರ ಮನೆಯಲ್ಲಿರಲಿಲ್ಲ ವೆನ್ನಲಾಗಿದೆ. ಸ್ಥಳೀಯರು ಹಾಗೂ ಪೊಲೀಸರು ಬಂದು ನೋಡುವಾಗ ಪುತ್ರ ಕೂಡಾ ಮನೆಯಲ್ಲಿ ಕಂಡು ಬಂದಿದ್ದಾನೆ. ಆದರೆ ಕೊಲೆ ಮಾಡಿದವರ ಬಗ್ಗೆ ತನಗೆ ತಿಳಿದಿಲ್ಲವೆಂದು ಪೊಲೀಸರಲ್ಲಿ ಹೇಳಿಕೆ ನೀಡಿದ ಈತನ ಬಗ್ಗೆ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಶಂಕೆ ಇದೆ ಎನ್ನಲಾಗಿದೆ.