ನೀರು ಸರಬರಾಜು ಇಲಾಖೆಯ ಪೈಪ್ ತುಂಡಾಗಿ ನೀರು ಪೋಲು: ಅಧಿಕಾರಗಳಿಗೆ ಗಾಢನಿದ್ರೆ

ಮಂಜೇಶ್ವರ: ಮಂಜೇಶ್ವರ ಪಂಚಾಯತ್ 2, 4, 8 ವಾರ್ಡ್ ವ್ಯಾಪ್ತಿಯ ತೂಮಿನಾಡು, ಕುಂಜತ್ತೂ ರುಪದವು, ಮಂಜೇಶ್ವರಕುನ್ನು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಕೇರಳ ನೀರು ಸರಬರಾಜು ಇಲಾ ಖೆಯ ನೀರಿನ ಪೈಪುಗಳು ತುಂಡಾಗಿ ಪೈಪ್‌ಗಳಿಂದ ನೀರು ಪೋಲಾಗುತ್ತಿ ರುವುದು ನಿತ್ಯ ಘಟನೆಯಾಗಿದೆ.

ಸ್ಥಳೀಯರು ಹಾಗೂ ಸಾಮಾ ಜಿಕ ಕಾರ್ಯಕರ್ತರು ಈ ಬಗ್ಗ ಕುಂಬಳೆ ಸಹಾಯಕ ಇಂಜಿನಿಯರ್ ಕಚೇರಿಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ  ಪ್ರತಿಕ್ರಿಯೆ ಇಲ್ಲವೆನ್ನಲಾ ಗಿದೆ. ಪೈಪ್‌ಗಳಲ್ಲಿ ಉಂಟಾಗುವ ಸೋರಿಕೆಯಿಂದ ಪ್ರತಿದಿನ ಲಕ್ಷಾಂತರ ಲೀಟರ್ ನೀರು ನಷ್ಟವಾಗುತ್ತಿದೆ. ಅಲ್ಲದೆ ಅನೇಕ ಮನೆಗಳಿಗೆ ನೀರು ಸರಬರಾಜು ಕೂಡಾ ಆಗುತ್ತಿಲ್ಲವೆನ್ನ ಲಾಗಿದೆ.  ಪ್ರತಿದಿನವೂ ನೀರು ಲಭ್ಯ ವಾಗದೆ ನಾವು ದೊಡ್ಡ ತೊಂದರೆಯ ಲ್ಲಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ. ಕುಂಬಳೆ ಸಹಾಯಕ ಇಂಜಿನಿಯರ್ ಈ ವಿಷಯದಲ್ಲಿ ಪ್ರತಿಕ್ರಿಯಿಸ ಬೇಕಾದ ರೂ ಜನರು ನೀಡಿದ ದೂರುಗಳಿಗೆ ಸೂಕ್ತ ಪ್ರಾಮುಖ್ಯತೆ ನೀಡದೆ ಇರುವುದು ಜನರ ಆಕ್ರೋಶಕ್ಕೆ ಕಾgಣವಾಗುತ್ತಿದೆ. ಜಲವಿತರಣಾ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇ ಕೆಂದೂ ನೀರು ಸೋರಿಕೆಯನ್ನು ತಡೆಗಟ್ಟಲು ತಾತ್ಕಾಲಿಕ ಪರಿಹಾರವಲ್ಲ, ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page