ನೀರ್ಚಾಲು: ಬೈಕ್ನಲ್ಲಿ ತಲುಪಿದ ದುಷ್ಕರ್ಮಿ ಮಹಿಳೆಯ ಕುತ್ತಿಗೆಯಿಂದ ಎಗರಿಸಿದ್ದು ನಕಲಿ ಚಿನ್ನ!
ಬದಿಯಡ್ಕ: ಸ್ಕೂಟರ್ನಲ್ಲಿ ತಲುಪಿದ ವ್ಯಕ್ತಿಯೋರ್ವ ಪಾದಚಾರಿಯಾದ ಮಹಿಳೆಯ ಕುತ್ತಿಗೆಯಿಂದ ಸರ ಎಗರಿಸಿದ್ದು, ಆದರೆ ಆ ಸರ ನಕಲಿ ಚಿನ್ನವಾಗಿದೆ!
ನಿನ್ನೆ ಬೆಳಿಗ್ಗೆ ನೀರ್ಚಾಲು ಪೂವಾಳೆಯಲ್ಲಿ ಘಟನೆ ನಡೆದಿದೆ. ಪೂವಾಳೆಯ ಗಿರಿಜ (೬೮) ಎಂಬವರ ಕುತ್ತಿಗೆಯಿಂದ ಸರವನ್ನು ಎಗರಿಸಲಾಗಿದೆ. ಗಿರಿಜ ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ಬಿಳಿ ಬಣ್ಣದ ಸ್ಕೂಟರ್ನಲ್ಲಿ ಹಿಂಭಾಗದಿಂದ ತಲುಪಿದ ದುಷ್ಕರ್ಮಿ ಮಾಲೆ ಎಗರಿಸಿ ಪರಾರಿಯಾಗಿದ್ದಾನೆ. ದುಷ್ಕರ್ಮಿ ಸರ ಎಗರಿಸುತ್ತಿದ್ದಾಗ ತಡೆದ ಗಿರಿಜರನ್ನು ದೂಡಿ ಹಾಕಿದ್ದು, ಇದರಿಂದ ಅವರ ಕಾಲಿಗೆ ಗಾಯಗಳಾಗಿವೆ. ಗಿರಿಜರ ಬೊಬ್ಬೆ ಕೇಳಿ ನಾಗರಿಕರು ಅಲ್ಲಿಗೆ ತಲುಪಿದ್ದು, ಅಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದನು.
ವಿಷಯ ತಿಳಿದು ಪೊಲೀಸರು ತಲುಪಿ ನಡೆಸಿದ ಪರಿಶೀಲನೆಯಲ್ಲಿ ದುಷ್ಕರ್ಮಿ ಸ್ಕೂಟರ್ನಲ್ಲಿ ಸೀತಾಂಗೋಳಿ ಭಾಗಕ್ಕೆ ತೆರಳುತ್ತಿರುವ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಮಹಿಳೆಯಿಂದ ಪೊಲೀಸರು ಹೇಳಿಕೆ ದಾಖಲಿಸಿದ್ದು, ಈ ವೇಳೆ ಇತ್ತೀಚೆಗೆ ೯೦೦ ರೂಪಾಯಿ ನೀಡಿ ಖರೀದಿಸಿದ ನಕಲಿ ಚಿನ್ನದ ಸರವನ್ನು ದುಷ್ಕರ್ಮಿ ಎಗರಿಸಿರುವುದಾಗಿ ತಿಳಿದುಬಂದಿದೆ. ಇದೇ ರೀತಿಯಲ್ಲಿ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಘಟನೆ ನಡೆದಿರುತ್ತದೆ. ಆದರೆ ಈ ಪ್ರಕರಣಗಳಲ್ಲಿ ಆರೋಪಿಗಳನ್ನು ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ಮತ್ತೊಂದು ಸರ ಎಗರಿಸಿದ ಘಟನೆ ನಿನ್ನೆ ಬೆಳಿಗ್ಗೆ ನಡೆದಿದೆ.