ನೀಲೇಶ್ವರದಿಂದ ಕದ್ದ ಬೈಕ್ ವಿದ್ಯಾನಗರದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ನೀಲೇಶ್ವರ ರೈಲು ನಿಲ್ದಾಣ ಪರಿಸರದಿಂದ ಕಳವುಗೈ ಯ್ಯಲ್ಪಟ್ಟ ಮೋಟಾರು ಬೈಕ್‌ನ್ನು ಉಪೇಕ್ಷಿತ ಸ್ಥಿತಿಯಲ್ಲಿ ವಿದ್ಯಾನಗರ ದಿಂದ ನೀಲೇಶ್ವರ ಎಸ್‌ಐ ಕೆ.ವಿ. ಪ್ರದೀಪ್ ನೇತೃತ್ವದ ಪೊಲೀಸರ ತಂಡ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಕಣ್ಣೂರು ಕಣ್ಣಾಪುರ ಪೊಲೀಸರು ಇತ್ತೀಚೆಗೆ ಎಡನೀರಿನ ಮುಹಮ್ಮದ್ ಮುಸ್ತಫಾ, ಆಲಪ್ಪಾಡಿಯ ಮೊಯ್ದೀನ್ ಪಾಸಿಲ್ (19) ಹಾಗೂ ಪ್ರಾಯ ಪೂರ್ತಿಯಾಗದ ಬಾಲಕನನ್ನು ಬಂಧಿಸಿದ್ದರು. ತೀವ್ರ ವಿಚಾರಣೆಗೊಳಪಡಿಸಿದಾಗ ನೀಲೇಶ್ವರ ರೈಲು ನಿಲ್ದಾಣ ಪರಿಸರದಿಂದ ಬೈಕ್‌ನ್ನು ಕದ್ದಿರುವುದು ಅವರೇ ಆಗಿದ್ದರೆಂದು ಪೊಲೀಸರು ತಿಳಿಸಿದ್ದು, ಅದರಂತೆ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆ ಬೈಕ್‌ನ್ನು ವಿದ್ಯಾನಗರದಿಂದ ಪತ್ತೆಹಚ್ಚಿದ್ದಾರೆ.
ಕಳವು ಹೋದ ಬೈಕ್ ಮಲಪ್ಪುರಂ ನಿವಾಸಿ ಹಾಗೂ ನರ್ಕಿಲಕ್ಕಾಡ್ ಶಾಲೆಯ ಅಧ್ಯಾಪಕರಾದ ಮುಬಾರಕ್ ಎಂಬವರದ್ದಾಗಿದೆ.